ಯುವಕನೊಬ್ಬ ದಾರಿಯಲ್ಲಿ ಏನೋ ಯೋಚನೆ ಮಾಡುತ್ತಾ ಹೋಗುತ್ತಿದ್ದ. ತುಸು ದೂರ ಸಾಗಿದಾಗ ಅವನಿಗೆ ಹಣದ ಕಟ್ಟೊಂದು ಬಿದ್ದು ಸಿಕ್ಕಿರುವುದು ಕಾಣಿಸಿತು. ಸುತ್ತಲೊಮ್ಮೆ ಕಣ್ಣಾಡಿಸಿದ ಯಾರು ಇರಲಿಲ್ಲ ತಕ್ಷಣ ಬಗ್ಗಿದವನು ಅದನ್ನು ಹೆಕ್ಕಿ ಕೈಯಲ್ಲಿ ಅದುಮಿ ಹಿಡಿದ. ಮೆಲ್ಲನೆ ಅದನ್ನು ತೆರೆದು ನೋಡುವಾಗ ಐನೂರ ಹಲವಾರು ನೋಟುಗಳಿದ್ದವು.

ಯುವಕನಿಗಾದ ಸಂತೋಷಕ್ಕೆ ಪಾರವೇ ಇಲ್ಲ. ಸರಿಸುಮಾರು 25 ಸಾವಿರ ರೂಪಾಯಿಗಳ ಕಟ್ಟು ಸಿಕ್ಕಿತ್ತೆಂದು ಖುಷಿಯಿಂದ ನಲಿದಾಡಿದ. ಮನಸ್ಸಲ್ಲಿ ಹೀಗೆ ಯೋಚಿಸಿದ “ಯಾವನೋ ಶ್ರೀಮಂತ ವ್ಯಕ್ತಿ ಈ ದಾರಿಯಲ್ಲಿ ಹೋಗಿದ್ದಾನೆ. ಅವನ ಕೈಯಿಂದ ದುಡ್ಡು ಬಿದ್ದಿರಬೇಕು. ಬಡ, ಮಧ್ಯಮ ವರ್ಗದವರ ಕೈಯಲ್ಲಿ ಇಷ್ಟೊಂದು ದುಡ್ಡು ಎಲ್ಲಿಂದ ಬರಬೇಕು?

ಜೀವನದಲ್ಲಿ ಅತೀ ದೊಡ್ಡ ಸಂಖ್ಯೆಯ ಹಣ ಸಿಕ್ಕಿತ್ತೆಂದು ನೂರಾರು ಆಲೋಚನೆ ಮಾಡುತ್ತಾ ಸ್ವಲ್ಪ ಸ್ನೇಹಿತರಿರಬ್ಬರ ಬಳಿ ವಿಷಯ ಹಂಚಿಕೊಂಡಾಗ ಹಿಂದುಮುಂದು ಯೋಚಿಸದೆ ಪುಕ್ಷಟೆ ಸಿಕ್ಕ ಹಣವೆಂದು ಸಕ್ಕತ್ ಮೋಜು ಮಾಡತೊಡಗಿದರು.‌ ಮೂವರು ಸೇರಿ ಸಿಗರೆಟ್, ಮದ್ಯಪಾನ ಮಾಡಿ ಒಂದೇ ದಿನದಲ್ಲಿ ಹಣವನ್ನು ಖರ್ಚು ಮಾಡಿ ಮುಗಿಸಿದರು. ಅವನ ಕೈಯಲ್ಲಿ ಕೇವಲ 500 ರೂಪಾಯಿ ಮಾತ್ರವೇ ಉಳಿದಿತ್ತು.

ಮರುದಿನ ಅದೇ ದಾರಿಯಲ್ಲಿ ಎಂದಿನಂತೆ ಬರುತ್ತಿದ್ದಾಗ ಮಧ್ಯವಯಸ್ಕ ಮಹಿಳೆಯೊಬ್ಬಳು ಆತುರಾತುರದಿಂದ ಮಹಿಳೆಯೊಬ್ಬರು ಆ ಕಡೆಯಿಂದ ಬರುವುದನ್ನು ನೋಡಿದ. ಯುವಕನ ಹತ್ತಿರ ಮಹಿಳೆ ಬಂದಾಗ ವಿಚಾರಸಿದನು. ಅದ್ಕೆ ಮಹಿಳೆ ಎದುಸಿರು ಬಿಡುತ್ತಾ “ಮಗ ನಿನ್ನೆ ಈ ದಾರಿಯಲ್ಲಿ ನಾನು ಹೋಗುವಾಗ ನನ್ನ ಕೈಯಲ್ಲಿದ್ದ ಹಣದ ಕಟ್ಟೊಂದು ಬಿದ್ದಿದೆ‌. ನಿನ್ನೆ ಇಡೀ ಹುಡುಕಾಡಿದೆ, ಎಲ್ಲರನ್ನೂ ವಿಚಾರಿಸಿದೆ ಎಲ್ಲೂ ಸಿಕ್ಕಿಲ್ಲ.‌ ನನ್ನ ಮಗನೊಬ್ಬ ಆಸ್ಪತ್ರೆಯಲ್ಲಿದ್ದಾನೆ. ಇವತ್ತು ಅವನ ಆಪರೇಷನ್ ಕೈಯಲ್ಲಿ ಹಣ ಇಲ್ಲ ಕಣ್ ಮಗ! ತರಕಾರಿ ಮಾರಿ ಜೀವನ ಸಾಗಿಸುತ್ತಿದ್ದೀನಿ” ಎಂದಾಗ ಯುವಕ ತಟಸ್ಥನಾದ.

ಆ ತಾಯಿ ಕಣ್ಣೀರು ಹಾಕುತ್ತಾ ಅತ್ತ ಇತ್ತ‌ ಕಣ್ಣಾಡಿಸುತ್ತಿದ್ದಳು. ಯುವಕನ ತಲೆಗೆ ಆಕಾಶವೇ ಕಳಚಿ ಬಿದ್ದ ಅನುಭವ. ಅವಸರಪಟ್ಟು ತಪ್ಪು ಮಾಡಿದ. ಹಿಂದುಮುಂದು ನೋಡದೆ, ಒಂದು ಕ್ಷಣ ಯೋಚಿಸದೆ ಯಾರೋ ಕಷ್ಟಪಟ್ಟ ಹಣವನ್ನು ಒಂದೇ ಘಳಿಗೆಯಲ್ಲಿ ತಿಂದು ನೀರು ಕುಡಿದಿದ್ದ. ಈಗೇನು ಮಾಡೋದೆಂದು ಯೋಚಿಸದೆ ಅಲ್ಲಿಂದ ಹೊರಟು ಹೋದ.

ಮರುದಿನ ಆ ತಾಯಿಯ ಮಗ ಆಸ್ಪತ್ರೆಯಲ್ಲಿ ಮೃತಪಟ್ಟ. ಯುವಕ ಮಾಡಿದ ಸಣ್ಣ ತಪ್ಪು ಒಂದು ಜೀವವನ್ನು ಬಲಿ ಪಡೆಯಿತು. ಒಂದು ಕುಟುಂಬವನ್ನು ಕಣ್ಣೀರಿನಲ್ಲಿ ಮಿಂದಿಸಿತು. ಆತುರದ ತೀರ್ಮಾನಕ್ಕೆ ಅವನು ಪಶ್ಚಾತ್ತಾಪ ಪಟ್ಟ. ಆದರೆ ಏನು ಮಾಡೋದು? ಕಾಲ ಅದಾಗಲೇ ಮಿಂಚಿ ಹೋಗಿದೆ.


* * **

ನಾವು ಕೂಡ ಹೀಗೆ ಅಲ್ವ? ಕೆಲವೊಮ್ಮೆ ಆಲೋಚಿಸದೆ ಮಾಡುವ ಸಣ್ಣಪುಟ್ಟ ತಪ್ಪುಗಳು ಒಬ್ಬರ ಜೀವನವನ್ನೇ ಬಲಿ ಪಡೆಯುತ್ತದೆ. ಅದರೆ ನಮಗೆ ಆ ಸಂದರ್ಭದಲ್ಲಿ ತಿಳಿಯುವುದಿಲ್ಲ. ಜೀವನದಲ್ಲಿ ಎಷ್ಟು ಸೂಕ್ಷ್ಮತೆ ಪಾಲಿಸಿದರೂ ಕಡಿಮೆಯೇ. ಹಾಗಾಗಿ ಪ್ರತಿಕ್ಷಣ ನಾವು ಎಚ್ಚೆತ್ತುಕೊಳ್ಳಬೇಕು. ತಪ್ಪು ಮಾಡಿದ ಬಳಿಕ ಪಶ್ಚಾತ್ತಾಪ ಪಡೊದಕ್ಕಿಂದ ಈಗ್ಗಿನಿಂದಲೇ ತಯಾರದರೆ ಅತೀ ಸುಂದರವಾದ ಬದುಕನ್ನು ಕಟ್ಟಬಹುದು ಏನಂತೀರಿ?

-ಸಮ್ಮಿ

Leave a Reply