ಮೀರತ್: 8ನೇ ತರಗತಿಯ ವಿದ್ಯಾರ್ಥಿ ರುದ್ರ ಪ್ರತಾಪ್ ಸಿಂಗ್ ಜಾಗತಿಕ ದೇಶಭಕ್ತಿಗೆ ವಿಶಿಷ್ಟ ಉದಾಹರಣೆಯಾಗಿದ್ದಾರೆ. 13 ನೇ ವಯಸ್ಸಿನಲ್ಲಿ, ಅವರು 18 ದೇಶಗಳ ರಾಷ್ಟ್ರ ಗೀತೆಗಳಲ್ಲಿ ಪಾರಂಗತರಾಗಿದ್ದಾರೆ. 21 ನೇ ವರ್ಷ ವಯಸ್ಸಿನವರೆಗೆ 100 ದೇಶಗಳ ರಾಷ್ಟ್ರ ಗೀತೆಗಳನ್ನು ಕಲಿಯಲು ಗುರಿ ಹೊಂದಿದ್ದಾರೆ.

ಯಾವುದೇ ಒಂದು ರಾಷ್ಟ್ರ ದೇಶದ ತಂಡವು ಅವರ ರಾಷ್ಟ್ರ ಗೀತೆಯನ್ನು ಸಾಮರಸ್ಯದೊಂದಿಗೆ ಹಾಡುವುದನ್ನು ದೂರದರ್ಶನದ ಮೂಲಕ ವೀಕ್ಷಿಸುತ್ತಿರುವಾಗ ಅವನಿಗೆ ಆಶ್ಚರ್ಯ ಆಗುತ್ತಿತ್ತು.

“ಅವರು ಪೈಲಟ್ ಆಗಲು ಬಯಸುತ್ತಾರೆ. ಆದ್ದರಿಂದ ವಿದೇಶಿ ರಾಷ್ಟ್ರಗಳನ್ನು ಭೇಟಿ ಮಾಡಿ ಅಲ್ಲಿನ ರಾಷ್ಟ್ರ ಗೀತೆಗಳನ್ನು ಕಲಿಯಬಹುದು ಎನ್ನುತ್ತಾರೆ.

ಎರಡು ವರ್ಷಗಳ ಹಿಂದೆ ಫುಟ್ಬಾಲ್ ಪಂದ್ಯದ ಸಮಯದಲ್ಲಿ, ಫ್ರೆಂಚ್ ಗೀತೆಯನ್ನು ಎದ್ದು ನಿಂತು ಅವರ ಜೊತೆ ಅವನು ಹಾಡಿದಾಗ ನಮಗೆ ಆಶ್ಚರ್ಯ ಆಗಿತ್ತು ಎಂದು ರುದ್ರ ಪ್ರತಾಪ್ ತಾಯಿ ಹೇಳಿದ್ದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಅನಾಥ ಮತ್ತು ನಿರ್ಗತಿಕ ಮಕ್ಕಳಿಗೆ ಹಣವನ್ನು ಸಂಗ್ರಹಿಸಲು ವಿಶ್ವದಾದ್ಯಂತ 80 ರಾಷ್ಟ್ರಗಳಲ್ಲಿ 80 ಗೀತೆಗಳನ್ನು ಹಾಡಿ ಗಿನ್ನಿಸ್ ವಿಶ್ವದಾಖಲೆ ಬರೆದ ಕ್ಯಾಪ್ರಿ ಎವರ್ಟ್ ಈ ಪುಟ್ಟ ರುದ್ರನಿಗೆ ಸ್ಫೂರ್ತಿ ಎಂದು ಅವರು ಹೇಳುತ್ತಾರೆ.

Leave a Reply