ಬೆಂಗಳೂರು: ದಿಚಕ್ರ ಸವಾರರಿಗೆ ಹೆಲ್ಮೆಟ್ ಜೊತೆಗೆ ಐಎಸೈ ಮಾರ್ಕ್ ಇರುವ ಹೆಲ್ಮೆಟ್ ಧರಿಸಲು ಹೇಳಲಾಗುತ್ತದೆ. ಆದರೆ ನಮ್ಮಲ್ಲಿ ಮಾರುಕಟ್ಟೆಯಲ್ಲಿ ಸಿಗುವ ಕಡಿಮೆ ಬೆಲೆಯ ಹೆಲ್ಮೆಟ್ ನಲ್ಲಿ ಜನ ತಮ್ಮ ಕೆಲಸ ಮುಗಿಸುತ್ತಾರೆ.

ಇದೀಗ ದ್ವಿಚಕ್ರ ಸವಾರರಿಗೊಂದು ಸಿಹಿಸುದ್ದಿ ಇದೆ.ದ್ವಿಚಕ್ರ ಸವಾರರು ಐಎಸ್​ಐ ಮಾರ್ಕ್ ಇರುವ ಹೆಲ್ಮೆಟ್​ನ್ನೇ ಧರಿಸಬೇಕೆಂದೇನಿಲ್ಲ ಎಂದು ಟ್ರಾಫಿಕ್ ಪೊಲೀಸರು ಹೇಳಿದ್ದಾರೆ.

ಪರಿಶೀಲನೆ ವೇಳೆ ಏಕಾಏಕಿ ಐಎಸ್‌ಐ ಸಾಬೀತುಪಡಿಸಲು ಸಾಧ್ಯವಿಲ್ಲ. ಯಾಕೆಂದರೆ ಐಎಸ್​ಐ ಮಾರ್ಕ್​ ಪರೀಕ್ಷಿಸಲು ಲ್ಯಾಬ್‌ನಲ್ಲಿ ಡಿಸ್ಟ್ರಕ್ಟಿವ್ ಟೆಸ್ಟ್ ಮಾಡಬೇಕು. ಘಟನಾ ಸ್ಥಳದಲ್ಲಿ ಐಎಸ್‌ಐ ಮಾರ್ಕ್ ಪತ್ತೆ ಮಾಡಲು ಮಾನದಂಡಗಳಿಲ್ಲ
ಎಂದು ನಗರ ಸಂಚಾರಿ ಹೆಚ್ಚುವರಿ ಪೊಲೀಸ್‌ ಆಯುಕ್ತ ಹಿತೇಂದ್ರ ಹೇಳಿದ್ದಾರೆ.

ಈ ಕುರಿತು ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್‌ನಿಂದ ಸಂಚಾರಿ ಪೊಲೀಸರಿಗೆ ಪತ್ರ ಬಂದಿದೆ. ಹಾಗಾಗಿ ಫೆಬ್ರವರಿಯಿಂದ ಐಎಸ್‌ಐ ಹೆಲ್ಮೆಟ್ ಕುರಿತ ಕಾರ್ಯಾಚರಣೆ ನಡೆಯುವುದಿಲ್ಲ ಎನ್ನಲಾಗಿದೆ.

ಜೀವ ರಕ್ಷಣೆಗೆ ಐಎಸ್ಐ ಮಾರ್ಕ್ ನ ಅಸಲಿ‌ ಹೆಲ್ಮೆಟ್ ‌ಧರಿಸಲು ಸಂಚಾರಿ ಪೊಲೀಸರ ಸಲಹೆ ನೀಡಿದ್ದಾರೆ. ಇದರಿಂದ ಹೆಲ್ಮೆಟ್ ಬಗೆಗಿನ ಗೊಂದಲ ಸ್ವಲ್ಪ ಮಟ್ಟಿಗೆ ನಿವಾರಣೆಯಾಗಿದೆ.

Leave a Reply