ಇಂಡೊನೇಶಿಯದಲ್ಲಿ ಮಹಿಳಾ ವಿಮಾನ ಅಟೆಂಡ್‍ಗೆ ಹಿಜಾಬ್ ಧರಿಸಬೇಕೆಂದು ಆದೇಶಿಸಿಲಾಗಿದೆ. ಆಸೇಹ್ ಪ್ರಾಂತದಲ್ಲಿ ಮುಸ್ಲಿಮ್ ಮಹಿಳೆ ಹಿಜಾಬ್ ಧರಿಸಬೇಕೆಂದು ತಿಳಿಸಲಾಗಿದೆ.

ಆಸೇಹ್ ಪ್ರಾಂತ ಇಂಡೊನೇಶಿಯದ ಅತ್ಯಂತ ಸಾಂಪ್ರದಾಯಿಕ ಮುಸ್ಲಿಮ್ ಕ್ಷೇತ್ರವಾಗಿದೆ. ಅಧಿಕಾರಿಗಳು ಏರ್‍ಲೈನ್ಸ್‍ನ ಎಲ್ಲ ಮಹಿಳಾ ಸ್ಟುಅಟ್, ಶರೀಅ ಕಾನೂನು ಪ್ರಕಾರದಂತೆ ಹಿಜಾಬನ್ನು ಕಡ್ಡಾಯವಾಗಿ ಧರಿಸಿರಬೇಕೆಂದು ಆದೇಶವನ್ನು ಹೊರಡಿಸಿದ್ದಾರೆ.

ಅಲ್ಲಿನ ಜೂಸರಿ ಮತ್ತು ಆಸೆಹ್ ಬೆಸಾರ್‍ನ ಮುಖ್ಯಸ್ಥ ಮಾವರ್ಧಿ ಅಲಿ ಮುಸ್ಲಿಮರಲ್ಲದ ಮಹಿಳೆಯರಿಗೆ ಹಿಜಾಬ್ ಧಾರಣೆ ಕಡ್ಡಾಯವಲ್ಲ ಎಂದು ತಿಳಿಸಿದ್ದಾರೆ. ಸರಕಾರ ಇಂಡೊನೇಶಿಯ ಮತ್ತು ಮಲೇಶಿಯ ವಿಮಾನ ಕಂಪೆನಿಗಳಿಗೆ ಈ ಕುರಿತು ಪತ್ರ ಬರೆದಿದೆ. ಇಂಡೊನೇಶಿಯ ವಿಮಾನ ಕಂಪೆನಿ ಸಿಟಿ ಲಿಂಕ್ ಈ ನಿರ್ಧಾರವನ್ನು ಸ್ವಾಗತಿಸಿದೆ. ಮತ್ತು ಶೀಘ್ರದಲ್ಲಿ ಈ ಪ್ರಕ್ರಿಯೆ ಜಾರಿಗೆ ಬರಲಿ ಎಂದಿದ್ದಾರೆ.

ಇನ್ನೊಂದೆಡೆ ಮಲೇಶಿಯದ ವಿಮಾನ ಕಂಪೆನಿ ಇದನ್ನು ಸೂಕ್ಷ್ಮ ಪ್ರಕರಣ ಎಂದು ತಿಳಿಸಿದ್ದು, ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇಂಡೊನೇಶಿಯ ಜಗತ್ತಿನಲ್ಲೇ ಅತಿ ಹೆಚ್ಚು ಮುಸ್ಲಿಮ್ ಜನಸಂಖ್ಯೆಯನ್ನು ಹೊಂದಿರುವ ದೇಶವಾಗಿದೆ. ಇಲ್ಲಿ ಶೇ. 87ರಷ್ಟು ಮಂದಿ ಇಸ್ಲಾಮ್ ಧರ್ಮ ವಿಶ್ವಾಸಿಗಳಿದ್ದಾರೆ.

Leave a Reply