ನನ್ನ ಮದುವೆ ಸಂದರ್ಭದಲ್ಲಿ ನಾನು ತೀರಾ ಆರ್ಥಿಕ ಮುಗ್ಗಟ್ಟಿನಲ್ಲಿ ಇದ್ದೆ. ನನ್ನ ಹಾಗೆಯೇ ಇನ್ನಸೆಂಟ್ ಆರ್ಥಿಕ ಸಂಕಷ್ಟದಲ್ಲಿದ್ದರು. ಆದರೂ ನನ್ನ ಮದುವೆಯ ವಿಷಯ ತಿಳಿದು ನನ್ನ ಕೈಗೆ 400 ರೂ. ಇಟ್ಟರು. ನಿಮ್ಮಲ್ಲಿ ಹಣ ಎಲ್ಲಿಂದ ಎಂದದ್ದಕೆ ಇದು ಪತ್ನಿಯ ಬಳೆಯ ಹಣ ಎಂದರು.

ರಿಜಿಸ್ಟರ್ ಆಫೀಸಿನಲ್ಲಿ ಹೆಂಡತಿಗೆ ಕರಿಮಣಿ ಹಾಕಬೇಕೆಂದು ಒತ್ತಾಯಿಸಿದಾಗ 2000 ರೂಪಾಯಿ ಹಣ ಕೊಟ್ಟು ಹರಸಿದ್ದು ಸ್ಟಾರ್ ನಟ ಮಮ್ಮುಟ್ಟಿ.

ನನ್ನ ಹೆಂಡತಿ ಹಿಂದೂ. ಅವಳು ಧರಿಸಿದ್ದ ಉಡುಪು ಕ್ರಿಶ್ಚಿಯನ್ ಮಹಿಳೆ ಕೊಟ್ಟದ್ದು, ನನ್ನ ಹೆಂಡತಿಯ ಕತ್ತಿಗೆ ಕಟ್ಟಿದ ತಾಳಿ ಮುಸ್ಲಿಂ ಕೊಟ್ಟಿದ್ದು.

ಯಾವುದು ಧರ್ಮ,ಯಾವುದು ಜಾತಿ?
ಒಂದೋ ಎಲ್ಲವನ್ನೂ ಬಿಟ್ಟು ಬಿಡೋಣ, ಇಲ್ಲವೇ ಎಲ್ಲವನ್ನೂ ನಂಬೋಣ.

-ಶ್ರೀನಿವಾಸನ್,ಖ್ಯಾತ ಮಲಯಾಳಂ ನಟ,ನಿರ್ದೇಶಕ ಹಾಗೂ ನಿರ್ಮಾಪಕ.

Leave a Reply