ಇಲ್ಲಿ ಕಾಲಕಾಲಕ್ಕೆ ನಡೆಯುತ್ತಿರುವ ಕೋಮು ಗಲಭೆಗಳು ಸಮಾಜವನ್ನು ವಿಭಜಿಸುವ ಕೆಲಸ ಮಾಡುತ್ತಿದೆ. ಇದರ ಹೊರತಾಗಿಯೂ ಈ ದೇಶದಲ್ಲಿ ಗಲಭೆ ಪ್ರಿಯರನ್ನು ಕುಪಿತಗೊಳಿಸುವ ಹಲವಾರು ಸೌಹಾರ್ದತೆಯ ಘಟನೆಗಳು ನಡೆಯುತ್ತಿದೆ. ಇದ್ದಕ್ಕೆ ಮತ್ತೊಂದು ಸೇರ್ಪಡೆ ಕೋಲ್ಕತ್ತಾದಲ್ಲಿ ಅಮಾನತಿ ಮಸೀದಿ.

ಕೊಲ್ಕತಾದ ಅಮಾನತಿ ಮಸೀದಿಯ ಸಂಚಾಲಕರು ಹಿಂದೂಗಳಾಗಿದ್ದು ಹಿಂದೂ ಮುಸ್ಲಿಮ್ ಸೌಹಾರ್ದದ ಕೇಂದ್ರ ಬಿಂದುವೆನಿಸಿಕೊಂಡಿದೆ.

ಹೃದಯ ಪುರ ಮತ್ತು ಬಾರಾಸಾತ್ ನಡುವೆ ಇರುವ ಮಸೀದಿಯನ್ನು ನೊಪಾಬಲಿ ನಿವಾಸಿ ಪಾರ್ಥ ಸಾರಥಿ ಬೋಸ್ ಮತ್ತು ಅವರ ಕುಟುಂಬ ನಿರ್ವಹಿಸುತ್ತಿದೆ. ಮಸೀದಿಯ ಪ್ರವೇಶದ ದ್ವಾರದಲ್ಲಿ ಪ್ರಭೂಕೋ ಪ್ರಣಾಮ್ ಕರೋ ಎಂದು ಬರೆಯಲಾಗಿದೆ.

ಪ್ರಾಚೀನ ಮಸೀದಿ ಇದಾಗಿದ್ದು 1960ರಿಂದ ಇದರ ನಿರ್ವಹಣೆ ಅಧಿಕಾರವನ್ನು ಕುಟುಂಬ ಹೊಂದಿದೆ. ಮೊದಲು ನಾವು ಬಾಂಗ್ಲಾ ದೇಶದಲ್ಲಿ ಆಸ್ತಿ ಹೊಂದಿದ್ದೆವು ನಂತರ ನಾಬಾ ಪಲ್ಲಿಯಲ್ಲಿ ಆಸ್ತ್ತಿ ಖರೀದಿಸಿದೆವು ಎಂದು ಬೋಸ್ ಹೇಳುತ್ತಾರೆ. ಅವರು ಖರೀದಿಸಿದ ಜಮೀನಿನಲ್ಲಿ ಮಸೀದಿ ಕೂಡಾ ಇತ್ತು.

ಅವರ ತಾತ ಮಸೀದಿಯನ್ನು ಕೆಡವುವ ಬದಲು ಎಲ್ಲ ಧರ್ಮಗಳ ಧರ್ಮ ಸ್ಥಳವನ್ನಾಗಿ ಮಾಡಲು ಬಯಸಿದರು. ಆ ನಂತರ ಈ ಅಮಾನತಿ ಮಸೀದಿ ಎಲ್ಲ ಧರ್ಮದವರ ಧರ್ಮಸ್ಥಳದ ರೂಪದಲ್ಲಿ ವಿಕಾಸ ಹೊಂದಿದೆ.

ಈ ಮಸೀದಿಯಲ್ಲಿ ಅಕ್ತರಲಿ ಎಂಬವರು ಇಮಾಮ್ ಆಗಿದ್ದಾರೆ. ಪ್ರತಿ ದಿವಸ ಸಂಜೆ ವೇಳೆ ಮಸೀದಿಗೆ ಹಿಂದೂಗಳು ಬರುತ್ತಾರೆ ಎಂದು ತಿಳಿಸಿದ್ದಾರೆ. ಈ ಮಸೀದಿ ಸಮೀಪ ಸಣ್ಣ ಮುಸ್ಲಿಂ ಮೊಹಲ್ಲ ಇದೆ. ಆದರೆ ಮಸೀದಿಗೆ ದೂರದ ಕಾಜಿಪಾರ ಚಂದನಪುರ ಮತ್ತು ಕೋರಾಗಳಿಂದಲೂ ನಮಾಝಿಗಾಗಿ ಮುಸ್ಲಿಮರು ಬರುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

Leave a Reply