ದೇಶದಲ್ಲಿ ಅತ್ಯಂತ ಹೆಚ್ಚು ಕೈದಿಗಳಿರುವ ತಿಹಾರ್ ಜೈಲಿನ 59 ಹಿಂದೂ ಕೈದಿಗಳು ತಮ್ಮ 2,299 ಸಹ ಕೈದಿಗಳ ಜೊತೆ ಉಪವಾಸ ನಿರತರಾಗಿದ್ದಾರೆ. ಆದರೆ ಪ್ರತಿಯೊಬ್ಬರೂ ಉಪವಾಸ ಆಚರಿಸಲು ತಮ್ಮದೇ ಆದ ಕಾರಣವನ್ನು ಹೊಂದಿದ್ದಾರೆಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.

45 ವಯಸ್ಸಿನ ಮಹಿಳೆ ತಾನು ಮಗನ ಕಲ್ಯಾಣಕ್ಕಾಗಿ ಉಪವಾಸ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಈ ಮಹಿಳೆಯನ್ನು ಅಪಹರಣ ಪ್ರಕರಣದಲ್ಲಿ ಬಂಧಿಸಲಾಗಿದೆ.

ಇನ್ನೊಬ್ಬರು ಕೈದಿ ತಮ್ಮ ಶೀಘ್ರ ಬಿಡುಗಡೆಯನ್ನು ಬಯಸಿ ಉಪವಾಸ ಮಾಡುತ್ತಿದ್ದಾರೆ . ಕೆಲವೇ ತಿಂಗಳ ಹಿಂದೆ ಜೈಲಿಗೆ ಬಂದ ಕೈದಿಯೊಬ್ಬನು ತನ್ನ ಸಹ ಕೈದಿಗಳು ಉಪವಾಸ ಆಚರಿಸುವುದನ್ನು ಕಂಡು ತಾನೂ ಉಪವಾಸ ಮಾಡುತ್ತಿದ್ದಾನೆ.

ಉಪವಾಸಿಗರ ಪೈಕಿ 97 ಮಹಿಳಾ ಕೈದಿಗಳೂ ಇದ್ದಾರೆ . ವಿವಿಧ ಜೈಲುಗಳೂ ಸೇರಿ ತಿಹಾರ್ ಜೈಲಿನಲ್ಲಿ ಸುಮಾರು 15,000 ಕೈದಿಗಳಿದ್ದಾರೆ. ದಾಖಲೆ ಮಟ್ಟಕ್ಕೇರಿದ ಉಷ್ಣಾಂಶದಲ್ಲಿ ಉಪವಾಸಿಗರಿಗಾಗಿ ವಿಶೇಷ ವ್ಯವಸ್ಥೆಯನ್ನು ಜೈಲು ಸಿಬ್ಬಂದಿಗಳು ನೋಡಿಕೊಳ್ಳುತ್ತಿದ್ದಾರೆ.

“ಈ ತಿಂಗಳ ಆರಂಭಕ್ಕೂ ಮೊದಲೇ ರಂಜಾನ್ ಗಾಗಿ ಸಭೆ ನಡೆಸಲಾಗಿತ್ತು . ಎಲ್ಲ ಜೈಲುಗಳಲ್ಲೂ ಸೂರ್ಯಾಸ್ತಮಾನದ ಸಮಯವನ್ನು ತೋರಿಸುವ ಬೋರ್ಡ್ ಹಾಕಿದ್ದೇವೆ. ನಮಾಜ್ ನಿರ್ವಹಿಸಲು ಸೂಕ್ತ ವ್ಯವಸ್ಥೆಯನ್ನೂ ಮಾಡಿದ್ದೇವೆ. ಅಲ್ಲದೆ ಉಪವಾಸಿಗ ಕೈದಿಗಳಿಗೆ ವಿಶ್ರಾಂತಿಯನ್ನೂ ನೀಡುತ್ತಿದ್ದೇವೆ ” ಎಂದು ಜೈಲಿನ ನಿರ್ದೇಶಕ ಜನರಲ್ ಅಜಯ್ ಕಶ್ಯಪ್ ಹೇಳಿದ್ದಾರೆ.

Leave a Reply