ಹುಟ್ಟುವಾಗ ಹಿಂದುವಾಗಿ ಹುಟ್ಟಿದ ಭವಾನಿಯವರು ತಾನು ಸತ್ತಾಗ ನನ್ನನ್ನು ಮುಸ್ಲಿಂ ಬಾಂಧವರು ಅಂತ್ಯ ಸಂಸ್ಕಾರ ಮಾಡುತ್ತಾರೆಂದು ಕನಸಿನಲ್ಲಿಯೂ ಊಹಿಸಿರಲಿಲ್ಲ.
ಕೋಮು ದ್ವೇಷವೇ ತುಂಬಿರುವ ಈಗಿನ ಕಾಲದಲ್ಲಿ ಧರ್ಮಕ್ಕೂ ಮೀರಿ ಮಾನವೀಯತೆ ಮೆರೆದ ಘಟನೆ ಕಬಕ ಗ್ರಾಮದ ವಿದ್ಯಾಪುರದಲ್ಲಿ ನೆಡೆದಿದೆ.

ಈ ದಿನ ಬೆಳಗ್ಗೆ ಹೃದಯಾಘಾತದಿಂದ ಮರಣ ಹೊಂದಿದ ಭವಾನಿಯವರ ಮೃತ ದೇಹವನ್ನು ಮಣ್ಣು ಮಾಡಲು ಸಂಬಂಧಿಕರು ಮುಂದೆ ಬರದೇ ಇದ್ದ ಪರಿಸ್ಥಿತಿಯಲ್ಲಿ ಎಲ್ಲ ಮುಸ್ಲಿಂ ಬಂಧುಗಳು ಒಟ್ಟಿಗೆ ಸೇರಿ ಹಣ ಸಂಗ್ರಹಿಸಿ ಅಂತ್ಯ ಸಂಸ್ಕಾರಕ್ಕೆ ಬೇಕಾಗುವ ಎಲ್ಲಾ ವಸ್ತುಗಳನ್ನು ತಂದು ಅಂತಿಮ ವಿಧಿ ವಿಧಾನದ ನಂತರ ಶವವನ್ನು ಸ್ಮಶಾಣಕ್ಕೆ ಕೊಂಡು ಹೋಗಿ ಮಣ್ಣು ಮಾಡಿದ ಘಟನೆ ನೆಡೆದಿದೆ.

ನಾನು ಈ ದಿನ ಅಂತಿಮ ದರ್ಶನಕ್ಕೆ ತೆರಳಿದಾಗ ಭವಾನಿಯವರ ಮನೆ ಮುಂದೆ ಬರಿ ಮುಸ್ಲಿಮರು ಇರುವುದನ್ನ ಕಂಡ ನನಗೆ ಭವಾನಿಯವರು ನಿಜವಾಗಿಯೂ ಅನಾಥರಲ್ಲ ಎಂಬುದಕ್ಕೆ ಅಲ್ಲಿದ್ದ ಜನರೇ ಸಾಕ್ಷಿಯಾಗಿ ತೋರಿಸಿದ್ದರು.
ಎಲ್ಲ ಪ್ರೀತಿಯ ಕಬಕ ಗ್ರಾಮಸ್ಥರಿಗೆ ನನ್ನದೊಂದು ದೊಡ್ಡ ಸೆಲ್ಯ್ಯೂಟ್ ಎನ್ನುತ್ತಾರೆ ಕಬಕ ಪೋಲಿಸ್ ಅಧಿಕಾರಿ ಮಂಜುನಾಥ್.

ಏನಿದು ಘಟನೆ

ಇತ್ತೀಚೆ ಹೃದಯಾಘಾತದಿಂದ ಬಳಲುತ್ತಿದ್ದ 52 ವರ್ಷದ ಮಹಿಳೆ ಭವಾನಿ ಮೃತಪಟ್ಟರು. ಕರ್ನಾಟಕದ ಪುತ್ತೂರು ತಾಲೂಕಿನ ವಿದ್ಯಾಪೂರದಲ್ಲಿರುವ ಜನವಸತಿ ಕಾಲೊನಿಯಲ್ಲಿ ವಾಸವಾಗಿರುವ ಭವಾನಿ ಅವಿವಾಹಿತೆ.

ಆಕೆಯ ಸಹೋದರ ಕೃಷ್ಣ, ಅಂತ್ಯ ಸಂಸ್ಕಾರ ವಿಧಿ ವಿಧಾನಗಳನ್ನು ನಡೆಸಲು ತನ್ನ ಸಂಬಂಧಿಕರು ಮತ್ತು ಸ್ಥಳೀಯರನ್ನು ಕರೆದಿದ್ದರು.  ಶನಿವಾರ ಮಧ್ಯಾಹ್ನದ ವರೆಗೆ ಮೃತ ದೇಹವು ಕೃಷ್ಣರವ ಮನೆಯಲ್ಲೇ ಉಳಿಯಿತು, ಆದರ ಯಾರೂ ಅವರಿಗೆ ಸಹಾಯ ಮಾಡಲು ಮುಂದೆ ಬರಲಿಲ್ಲ.

ಆದರೆ ಸ್ಥಳೀಯ ಯುವಕರಾದ ಶೌಕತ್, ಹಂಝ, ನಝೀರ್, ರಿಯಾಜ್ ಮತ್ತು ಫಾರೂಕ್ ಅವರು ಹಣವನ್ನು ಸಂಗ್ರಹಿಸಲು ತೊಡಗಿದರು. ಧಾರ್ಮಿಕ ಸಂಪ್ರದಾಯದ ವಿಧಿವಿಧಾನಗಳನ್ನು ನೆರವೇರಿಸಲು ಭವಾನಿಯ ಸಹೋದರ ಕೃಷ್ಣರಿಗೆ ನೆರವಾದರು.

ಆಂಗನವಾಡಿ ಶಿಕ್ಷಕಿ ರಾಜೇಶ್ವರಿ, ಸ್ಥಳೀಯರಾದ ಸಫಿಯಾ ಮತ್ತು ಜುಬೈದಾ ಮೃತದೇಹಕ್ಕೆ ಸ್ನಾನ ಮಾಡಿಸಿ ಮಾನವೀಯತೆ  ಮೆರೆದರು.

“ನಾವು ಇದನ್ನು ಪ್ರಚಾರಕ್ಕಾಗಿ ಮಾಡಲಿಲ್ಲ. ಮೃತರ ಜಾತಿ ಅಥವಾ ಧರ್ಮವನ್ನು ಪರಿಗಣಿಸದೆ ನಾವು ಸಹಾಯ ಮಾಡಲು ಮುಂದೆ ಬಂದಿದ್ದೇವೆ. ಯಾವುದೇ ಕಾರಣಕ್ಕೂ ಮೃತರ ಅಂತ್ಯ ಸಂಸ್ಕಾರದ ವಿಧಿವಿಧಾನಗಳು ನಿರಾಕರಿಸಲ್ಪಡಬಾರದು ಎಂಬ ಸಂದೇಶವನ್ನು ನೀಡಲು ನಾವವು ಬಯಸಿದ್ದೇವೆ ” ಎಂದು ಸ್ಥಳೀಯ ಫಾರೂಕ್ ಹೇಳಿದರು.

Leave a Reply