2005 ಕ್ಕಿಂತಲೂ ಮೊದಲು ಜನಿಸಿದವರೆಂಬ ಕಾರಣಕ್ಕಾಗಿ ಮಹಿಳೆಯರಿಗೆ ನೀಡಲಾಗಿರುವ ಆಸ್ತಿಯ ಹಕ್ಕನ್ನು ಕಸಿಯಲಾಗದು. ಹಿಂದೂ ಉತ್ತರಾಧಿಕಾರ ಕಾಯ್ದೆಯು 2005 ರಲ್ಲಿ ಜಾರಿಗೊಂಡಿದುದೆಂಬ ಕಾರಣಕ್ಕಾಗಿ ಕಾಯ್ದೆಗೂ ಮುನ್ನ ಜನಿಸಿದವರಿಗೆ ಆಸ್ತಿಯಲ್ಲಿ ಹಕ್ಕನ್ನು ನೀಡದಿರುವುದು ಸಮಂಜಸವಲ್ಲ.

ಹೆತ್ತವರ ಮರಣಾನಂತರ ಹಂಚಿಕೆ ಯಾಗದ ಆಸ್ತಿಯಲ್ಲಿ ಹಿಂದೂ ಮಹಿಳೆಯರಿಗೂ ಪುರಷರಷ್ಟೇ ಸಮಾನ ಹಕ್ಕಿದೆ. ಎಂದು ಜಸ್ಟೀಸ್ ಏ.ಕೆ ಸಿಕ್ರಿ ಮತ್ತು ಜಸ್ಟೀಸ್ ಅಶೋಕ್ ಭೂಷಣ್ ರವರ ಪೀಠವು ತೀರ್ಪು ಶುಕ್ರವಾರ ನೀಡಿದೆ.

2007 ರಲ್ಲಿ ತಂದೆಯ ಮರಣಾನಂತರ ಆಸ್ತಿಯಲ್ಲಿ ಪಾಲು ನೀಡಬೇಕೆಂದು ಕೋರಿ ಇಬ್ಬರು ಸಹೋದರಿಯರು ಅಪೆಕ್ಸ್ ಕೋರ್ಟಿಗೆ ಮನವಿ ಸಲ್ಲಿಸಿದ್ದರು. ತದನಂತರ ಹೈಕೋರ್ಟ್ ಹಿಂದೂ ಉತ್ತರಾಧಿಕಾರ ಕಾಯಿದೆ 2005 ರ ಅನ್ವಯ ಕಾಯ್ದೆಗೂ ಮುನ್ನ ಜನಿಸಿದವರೆಂಬ ಕಾರಣಕ್ಕಾಗಿ ಆಸ್ತಿಯಲ್ಲಿ ಪಾಲನ್ನು ಪಡೆಯಲು ಅರ್ಹರಲ್ಲವೆಂದು ತೀರ್ಪು ನೀಡಿತ್ತು. ತದನಂತರ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಹೋದರಿಯರು ಸುಪ್ರೀಂ ಕೋರ್ಟಿಗೆ ಮನವಿ ಸಲ್ಲಿಸಿದ್ದರು.

(ಸಾಂದರ್ಭಿಕ ಚಿತ್ರ)

Leave a Reply