ಭಾರತದಲ್ಲಿ ಸುಮಾರು 140,000 ಮಕ್ಕಳು ಎಚ್ಐವಿ ಪೀಡಿತರಾಗಿದ್ದಾರೆ. ಹೆಚ್ಐವಿ ಪೀಡಿತ ಮಕ್ಕಳ ದುಖ ದುಮ್ಮಾನ, ದುಗುಡ ಅವರಿಗೇ ಗೊತ್ತು.ಯಾರೋ ಮಾಡಿದ ತಪ್ಪಿಗೆ ಅವರು ಜೀವನವಿಡೀ ಕೊರಗುತ್ತಾರೆ. ಅವರನ್ನು ದೂರ ಮಾಡಲಾಗುತ್ತದೆ. ಎಷ್ಟೇ ಕನಿಕರ ತೋರಿದರೂ ಅವರನ್ನು ದೂರ ಇಡಲು ಬಯಸುತ್ತಾರೆ.

ಆದರೆ ಇಲ್ಲೊಬ್ಬರು ಸೋಲಮನ್ ಎಂಬ ವ್ಯಕ್ತಿ ಹೆಚ್ಐವಿ ಪೀಡಿತ ಮಕ್ಕಳನ್ನು ದತ್ತು ಪಡೆದು ಸಾಕುತ್ತಾರೆ. ಒಬ್ಬ ಹುಡುಗನ ಇಡೀ ಕುಟುಂಬ ಹೆಚ್ಐವಿ ಪೀಡಿತವಾಗಿ ಮರಣ ಹೊಂದಿದಾಗ ಅವರ ಕುಟುಂಬದವರು ಅವನನ್ನು ನಿರ್ಲಕ್ಷ್ಯ ಮಾಡಿದಾಗ, ಓರ್ವ ಉಭಯ ಲಿಂಗಿಯ ಮಾಹಿತಿ ಮೇರೆಗೆ ಸೋಲಮನ್ ಆ ಬಾಲಕನನ್ನು ಮನೆಗೆ ತಂದು ಸಾಕಲು ತೊಡಗಿದರು. ಹೀಗೆ ಈ ಸುದ್ದಿ ಹರಡಿ ಇದೀಗ ಅವರು ಹೆಚ್ಐವಿ ಪೀಡಿತ ಮಕ್ಕಳ ತಂದೆ ಎಂದೇ ಚಿರ ಪರಿಚಿತ ರಾಗಿದ್ದಾರೆ. ಆ ಮಕ್ಕಳನ್ನು ಸ್ವಂತ ಮಕ್ಕಳಂತೆ ಸಾಕುತ್ತಾರೆ. ಅವರ ಶುಶ್ರೂಷೆಗೆ ಚಿಂತಿತರಾಗಿರುತ್ತಾರೆ. ಅವರಿಗೆ ಬೇಕಾದ ಎಲ್ಲವನ್ನೂ ಮಾಡುತ್ತಾರೆ.

ಅವರು ಹೆಚ್ಐವಿ ಪೀಡಿತ ಮಕ್ಕಳನ್ನು ಸಾಕುತ್ತಾರೆ ಎಂಬ ನ್ಯೂಸ್ ಹರಡಿದ ಬಳಿಕ ಅವರ ಬಳಿ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಆ ಮಕ್ಕಳ ಮುಖದಲ್ಲಿ ಕಾಣುವ ನಗು, ಅವರ ಬಾಳಲ್ಲಿ ಸ್ಪುರಿಸುವ ಬೆಳಕು ಎಲ್ಲವನ್ನೂ ನೀವು ವೀಡಿಯೋ ಮೂಲಕ ನೋಡಬಹುದು. ಅದಕ್ಕಾಗಿ ಅವರು ತಮ್ಮ ಎಲ್ಲವನ್ನೂ ತ್ಯಾಗ ಮಾಡಿದ್ದಾರೆ. ಉದ್ಯೋಗವನ್ನೂ ತ್ಯಜಿಸಬೇಕಾಯಿತು. ವೈರಸ್ ಹರಡುತ್ತದೆ ಎಂದು ಸಹೋದ್ಯೋಗಿಗಳು ದೂರ ಮಾಡಿದರು. ನಮ್ಮ ಕುಟುಂಬದವರು ಅವರನ್ನು ದೂರ ಮಾಡಿದರು. ಇದರಿಂದ ಅವರು ಎದೆಗುಂದಲಿಲ್ಲ. ಅವರಿಗೆ ಇನ್ನಷ್ಟು ಶಕ್ತಿ ಸಿಕ್ಕಿದೆ ಎಂದು ಅವರು ಹೇಳುತ್ತಾರೆ. ಅವರಿಗೆ ಒಂದು ಉತ್ತಮ ಕುಟುಂಬ ಸಿಕ್ಕಿದೆ. ಎಲ್ಲರೂ ಅವರನ್ನು ಪ್ರೀತಿಯಿಂದ ಅಪ್ಪ ಎಂದು ಕರೆಯುತ್ತಾರೆ.

ಇಂದಿನ ಸ್ವಾರ್ಥ ಜಗತ್ತಿನಲ್ಲಿ ಸೋಲಮನ್ ರಂತಹ ಹೃದಯವಂತರು ಧೈರ್ಯವಂತರು ಸಿಗುವುದು ಕಷ್ಟ. ಇವರೇ ನಿಜ ಜೀವನದ ಹೀರೋ….

ಈ ವಿಡಿಯೋ ನೋಡಿದರೆ ಸಾಲದು. ಇತರರಿಗೆ ಪ್ರೇರಣೆಯಾಗಲು ಇದನ್ನು ಶೇರ್ ಮಾಡಲು ಮರೆಯದಿರಿ…..

 

Video courtesy: Better India

Translation: idunammaooru.in

Leave a Reply