ಆಸ್ಪತ್ರೆ, ಡಾಕ್ಟರ್ ಎಂದರೆ ನಮ್ಮ ಕಲ್ಪನೆ ಹೇಗೆ? ಬಹಳ ಗಂಭೀರವಾಗಿರುತ್ತಾರೆ. ನಾಲ್ಕು ಸುತ್ತಲೂ ಮೌನ. ಆದರೆ ಮಧ್ಯ ಪದೇಶ ಆಸ್ಪತ್ರೆಯಲ್ಲಿ ರೋಗಿಗಳ ಮುಂದೆ ಡಾಕ್ಟರ್ ಡಿಜೆ ಹಾಕಿ ಡ್ಯಾನ್ಸ್ ಮಾಡಿದ ಘಟನೆ ನಡೆದಿದೆ.

ರೋಗಿಗಳ ಮುಂದೆಯೇ ಜಿಲ್ಲಾಸ್ಪತ್ರೆಯ ವೈದ್ಯರು ಡ್ಯಾನ್ಸ್ ಮಾಡುವುದನ್ನು ಕಂಡು ರೋಗಿಗಳು ಹತಾಶರಾಗಿದ್ದು ರೋಗಿಯೊಬ್ಬರು ವೈದ್ಯರ ಬಳಿ ಹೋಗಿ ದೂರು ನೀಡಿದಾಗ ವೈದ್ಯರು ಅವರನ್ನೇ ಬೈದು ವಾಪಾಸ್ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ. ಡ್ಜ್ ಶಬ್ದ ಅತೀ ಜೋರಾಗಿದ್ದರಿಂದ ರೋಗಿಗಳಿಗೆ ಕಿರಿಕಿರಿಯಾಗಿತ್ತು.

ಬೋಲೋ ತಾರಾರಾ ಎಂಬ ಪಂಜಾಬಿ ಹಾಡನ್ನು ಹಾಕಿ ಕುಣಿದು ಕುಪ್ಪಳಿಸಿದ್ದಾರೆ. ಇಂತಹ ಪ್ರದೇಶದಲ್ಲಿ ವಿವಿಧ ರೀತಿಯ ರೋಗಿಗಳು ಇರುತ್ತಾರೆ. ಇಂತಹ ಅನುಚಿತ ವರ್ತನೆ ಸರಿಯಲ್ಲ ಎಂದು ರೋಗಿಯೊಬ್ಬರು ಹೇಳಿದ್ದಾರೆ.
ಈ ಘಟನೆ ನಮ್ಮ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ಸಂಬಂಧ ಪಟ್ಟವರು ಹೇಳಿದ್ದಾರೆ.

ಆಸ್ಪತ್ರೆಯ ಕಂಪೌಂಡರ್ ರಾಜೀವ್ ಬಳ್ಳಾರಿ ಹಾಗೂ ಅಂಬುಲೆನ್ಸ್ ಡ್ರೈವರ್ ಪಾಂಡು ನೇತೃತ್ವದಲ್ಲಿ ಕೆಲಸ ಮಾಡದೇ ಇಸ್ಪೀಟ್ ಆಟದಲ್ಲಿ ಮಗ್ನನಾಗಿದ್ದರು ಎನ್ನುವ ಆರೋಪಿಸಲಾಗಿದೆ. ಡಾಕ್ಟರ್ ಗಳು ಡ್ಯಾನ್ಸ್ ನಲ್ಲಿ ಮಗ್ನ ರಾಗಿದ್ದರು. ವಿಜಯಪುರ ಸೇರಿದಂತೆ ಸೊಲ್ಲಾಪುರ ಹಾಗೂ ಮಹಾರಾಷ್ಟ್ರದಿಂದ ಕೂಡ ರೋಗಿಗಳು ವಿಜಯಪುರ ಜಿಲ್ಲಾಸ್ಪತ್ರೆಗೆ ಬರುತ್ತಾರೆ. ಆಸ್ಪತ್ರೆಯಲ್ಲಿ ಇಂತಹ ಅನುಚಿತ ವರ್ತನೆ ಮತ್ತು ಇಸ್ಪೀಟ್ ಆತ ನಿಜಕ್ಕೂ ಖಂಡನೀಯ ಆಗಿದೆ.

Leave a Reply