ನರ್ಸ್ ಲಿನಿಯವರ ಹೆಸರು ಕೇಳದವರು ಯಾರೂ ಇರಲಿಕ್ಕಿಲ್ಲ. ಇತ್ತೀಚೆಗೆ ಕೇರಳದಲ್ಲಿ ಸಂಭವಿಸಿದ ನಿಫಾ ವೈರಸ್‌ ರೋಗಿಗಳಿಗೆ ಶುಶ್ರೂಷೆ ಮಾಡುತ್ತಾ ಸ್ವತಃ ಇವರು ಆ ವೈರಸ್ಗೆ ಬಲಿಯಾಗಿದ್ದರು. ಆಕೆಯ ಮರಣಾನಂತರ ಆಕೆಯ ಪತಿಗೆ ಸರಕಾರವು ಸರಕಾರಿ ಉದ್ಯೋಗ ನೀಡಿತ್ತು.

ಇದೀಗ ನರ್ಸ್ ಲಿನಿಯವರ ಗಂಡ ಸಜೀಶ್ ತಮ್ಮ ಮೊದಲ ಸರಕಾರಿ ಸಂಬಳವನ್ನು ಕೇರಳ ನೆರೆ ಸಂತ್ರಸ್ತರಿಗೆ ದಾನ ಮಾಡಿದ್ದಾರೆ.

ತಮ್ಮ ಪತ್ನಿಯ ಅಕಾಲಿಕ ಮರಣದ ಬಳಿಕ ಸಜೀಶ್ ಬಹರೈನ್ ನಲ್ಲಿದ್ದ ಉದ್ಯೋಗ ತ್ಯಜಿಸಿ ತನ್ನಿಬ್ಬರು ಮಕ್ಕಳ ಬಳಿಗೆ ಮರಳಿದ್ದರು. ಈ ನಿಟ್ಟಿನಲ್ಲಿ ಸರಕಾರದ ವತಿಯಿಂದ ಅವರಿಗೆ ಉದ್ಯೋಗ ಆಫರ್ ಇತ್ತು.

ಒಂದು ತಿಂಗಳ ಹಿಂದೆ
ಸಜೀಶ್ ಕೊಥಾರಿಯ ಪಬ್ಲಿಕ್ ಹೆಲ್ತ್ ಸೆಂಟರ್ ಗೆ ಕ್ಲರ್ಕ್ ಆಗಿ ಸೇರಿಕೊಂಡರು,
ಅವರು ತಮಗೆ ಸಿಕ್ಕ ಮೊದಲ ಸಂಬಳವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿ ಮಾನವೀಯತೆ ಮರೆದಿದ್ದಾರೆ.

Leave a Reply