ಬರೋಬ್ಬರಿ ಎರಡು ತಿಂಗಳು ಮಂಜು ಆವರಿಸಿದ ಕಾರಿನೊಳಗೆ ಸಿಕ್ಕಿ ಹಾಕಿಕೊಂಡಿದ್ದ ಸ್ವೀಡಿಷ್ ವ್ಯಕ್ತಿಯೊಬ್ಬನನ್ನು ಹೊರ ತೆಗೆಯಲಾಯಿತು.

ಪೀಟರ್ ಸ್ಕಿಲ್ಬರ್ಗ್ ಎನ್ನುವ 44 ವರ್ಷದ ವ್ಯಕ್ತಿ ಮಂಜು ಆವರಿಸಿದ ಕಾರಿನಲ್ಲಿ ಎರಡು‌ ತಿಂಗಳು ಬಾಕಿಯಾಗಿದ್ದರು.

ಹೆದ್ದಾರಿಯಿಂದ ಸ್ವಲ್ಪ ದೂರ ಕಾಡಿನ ದಾರಿಯಲ್ಲಿ ಹೋಗಿದ್ದ ಕಾರು‌ ಹಿಮಪಾತವಾದಾಗ ಮಂಜಿನಲ್ಲಿ ಸಿಕ್ಕಿ ಹಾಕಿಕೊಂಡಿತ್ತು. ರಸ್ತೆಯಿಂದ ಮಂಜು ತೆಗೆಯುವ ವಾಹನದಲ್ಲಿ‌ ಬಂದ ಪೋಲಿಸರಿಗೆ ವಿಷಯ ಮನದಟ್ಟಾಗಿ ಪೀಟರ್ ನನ್ನು ರಕ್ಷಿಸಿದರು. ಆಷ್ಟೊತ್ತಿಗೆ ಪೀಟರ್ ಕೇವಲ ಮಂಜು ತಿನ್ನುತ್ತಾ ಎರಡು ತಿಂಗಳು ಕಾರಿನಲ್ಲಿ ಕಳೆದಿದ್ದ.

ಎರಡು ತಿಂಗಳು‌ ಆತನನ್ನು ಯಾರು ಯಾಕೆ ಹುಡುಕಲಿಲ್ಲ ಎನ್ನುವ ಸಂಶಯದಲ್ಲಿ ಪೋಲಿಸರು ವಿಚಾರಣೆ ಮಾಡಿದಾಗ, ಪೀಟರ್ ಗೆ ಮನೆ‌ ಇರಲಿಲ್ಲ ಅವನು‌‌ ಕಾರಿನಲ್ಲೆ ಮಲಗುತ್ತಿದ್ದ ಎಂಬುದು ಪೊಲೀಸರಿಗೆ ತಿಳಿಯಿತು.

‌ಆದರೆ ಎರಡು ತಿಂಗಳು ಕಾರಿನಿಂದ ಹೊರಬಾರದೆ ಮಲಗಬೇಕಾಗಬಹುದು‌ ಎಂದು ಅವನು‌ ಕೂಡ ಉಹಿಸಿರಲಿಕ್ಕಿಲ್ಲ.

Leave a Reply