ಮಾಜಿ ಖ್ಯಾತ ಕ್ರಿಕೆಟಿಗ ಮತ್ತು ತಹ್ರೀಕೆ ಇನ್ಸಾಫ್ ಪಕ್ಷದ ನೇತಾರ ಇಮ್ರಾನ್ ಖಾನ್ ಇನ್ನೊಂದು ಮದುವೆ ಆಗುವ ಮೂಲಕ ತೃತೀಯ ಇನ್ನಿಂಗ್ಸ್ ಶುರು ಮಾಡಿದ್ದಾರೆ.

Image result for imran khan

ಇಮ್ರಾನ್ ಖಾನ್ ಮೊದಲ ಬಾರಿಗೆ 1995 ರಲ್ಲಿ ಜೆಮಿಕಾ ಗೋಯಲ್ಡ್ಸ್ಮಿತ್ ಸಂಬಂಧ ಹೊಂದಿದ್ದರು. ಇದು 2004 ರಲ್ಲಿ ಒಂಬತ್ತು ವರ್ಷಗಳ ನಂತರ ವಿಚ್ಛೇದನದಲ್ಲಿ ಕೊನೆಗೊಂಡಿತು. ಅವರ ಎರಡನೇ ಮದುವೆ
ಟಿವಿ ಆಂಕರ್ ರೆಹಮ್ ಖಾನ್ ನೊಂದಿಗೆ ಆಗಿತ್ತು, ನಂತರ , ಅದು ಕೇವಲ 10 ತಿಂಗಳವರೆಗೆ ಕೊನೆಗೊಂಡಿತು.

ಇದೀಗ ಇಮ್ರಾನ್ ರಿಗೆ ಆಧ್ಯಾತ್ಮಿಕ ಸಲಹೆಗಳನ್ನು ನೀಡುತ್ತಿದ್ದ ಬುಶರಾ ಮನೇಕಾ ಅವರನ್ನೇ ತಮ್ಮ 65 ವರ್ಷದಲ್ಲಿ ಮದುವೆಯಾಗುವ ಮೂಲಕ ಎಲ್ಲರನ್ನೂ ಅಚ್ಚರಿ ಗೊಳಿಸಿದ್ದಾರೆ.

ಬುಶರಾ ಅವರನ್ನು `ಪಿಂಕಿ ಪೀರ್’ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ.

ಲಾಹೋರ್ ನಲ್ಲಿರುವ ಬುಶರಾ ಅವರ ಸಹೋದರನ ಮನೆಯಲ್ಲಿ ಮದುವೆ ನಡೆದಿದ್ದು, ಪಿಟಿಐ ಪಕ್ಷದ ಸದಸ್ಯರಾಗಿರುವ ಮುಫ್ತಿ ಮೊಹಮ್ಮದ್ ಸೈಯದ್ ಅವರು ಇಬ್ಬರ ಮದುವೆಯನ್ನು ಮಾಡಿಸಿದ್ದಾರೆ.

ಇಮ್ರಾನ್ ಖಾನ್ ತಮ್ಮ ಧಾರ್ಮಿಕ ಸಲಹೆಗಾರ್ತಿ ಜೊತೆ ಮದುವೆಯಾಗಿದ್ದಾರೆ ಎಂಬ ಊಹಾಪೋಹಗಳಿಗೆ ಈಗ ತೆರೆ ಬಿದ್ದಿದೆ.

Image result for imran khan marriage

ಇಮ್ರಾನ್ ಖಾನ್ ಧರ್ಮಕ್ಕೆ ಸಂಬಂಧಿಸಿದ ಸಲಹೆಗಳನ್ನು ನೀಡುತ್ತಿದ್ದರು. ಈ ಹಿಂದೆ ನೀವು ಮೂರನೇ ಮದುವೆಯಾದರೆ, ನಿಮ್ಮ ರಾಜಕೀಯದ ಮೇಲೆ ಪರಿಣಾಮ ಬೀರಲಿದೆ. ಮದುವೆಯ ನಂತರ ನೀವು ಪಾಕಿಸ್ತಾನದ ಪ್ರಧಾನ ಮಂತ್ರಿಯೂ ಆಗಲಿದ್ದೀರಿ ಎಂದು ಅವರು ಭವಿಷ್ಯ ನುಡಿದಿದ್ದರು.

ಬುಶರಾ ಈ ಮೊದಲೇ ಮದುವೆಯಾಗಿದ್ದು, 5 ಮಕ್ಕಳ ತಾಯಿಯಾಗಿದ್ದಾರೆ. ಬುಶರಾ ಲಾಹೋರ್ ನಿಂದ 250 ಕಿಮೀ ದೂರದಲ್ಲಿರುವ ಪಾಕಪಟನಾ ಜಿಲ್ಲೆಯ ನಿವಾಸಿಯಾಗಿದ್ದಾರೆ. ಈ ಹಿಂದೆ ಅವರು ಪಾಕಿಸ್ತಾನದ ಅಧಿಕಾರಿಯೋರ್ವರನ್ನು ಮದುವೆ ಆಗಿದ್ದರು.

Leave a Reply