ದರ್ಬಾನ್: ಭಾರತ ಹಾಗೂ ಅತಿಥೇಯ ದಕ್ಷಿಣ ಆಫ್ರಿಕಾ ನಡುವೆ ನಡೆಯುತ್ತಿರುವ ಮೊದಲ ಪಂದ್ಯದಲ್ಲೇ‌ ಕಪ್ತಾನ ಸೆಂಚುರಿ ಮೆಷಿನ್ ಕೊಹ್ಲಿ 112 ಭರ್ಜರಿ ಶತಕ ಹಾಗೂ ಅಜಿಂಕ್ಯಾ ರಹಾನೆಯ 79 ಅರ್ಧ ಶತಕದ ನೆರವಿನಿಂದ 6 ವಿಕೆಟ್‌ಗಳ ಜಯ ದಾಖಲಿಸಿದೆ.

ಟಾಸ್ ಸೋತು ಫೀಲ್ಡಿಂಗ್ ಆಯ್ದುಕೊಂಡು ಕೊಂಡ ಭಾರತ ಆಫ್ರಿಕನ್ನರಿಗೆ ಆರಂಭಿಕ ಆಘಾತ ನಿಡಿದ್ದರೂ ಕಪ್ತಾನ ಡು ಪ್ಲೆಸಿಸ್ ಭರ್ಜರಿ ಶತಕದ 120 (112) ನೆರವಿನಿಂದ 269/8 ರನ್‌ಗಳ ದಾಖಲಿಸಿತ್ತು. ಒಂದು ಹಂತದಲ್ಲಿ150/6 ಇದ್ದ ದಕ್ಷಿಣ ಆಫ್ರಿಕಾ ಇನ್ನೂರರ ಗಡಿ ದಾಟೋದು ಸಂಶಯವಾಗಿತ್ತು ಆದರೆ ಆಫ್ರಿಕನ್ ಕಪ್ತಾನನ ಜೊತೆ ಸೇರಿದ ಕ್ರಿಸ್ ಮೋರಿಸ್ ಹಾಗೂ ಪಿಲ್‌ಕುವಾಯೋ ಅದಕ್ಕೆ ಅವಕಾಶ ಕೊಡಲಿಲ್ಲ. ಭಾರತದ ಪರ ಕುಲದೀಪ್ ಯಾದವ್ 34/3, ಯುಜುವೇಂದ್ರ ಚಹಲ್ 45/2 ವಿಕೆಟ್‌ಗಳನ್ನು ಪಡೆದು ಮಿಂಚಿದರು.

270ರನ್‌ಗಳ ಸವಾಲನ್ನು ಬೆನ್ನಟ್ಟಿದ್ದ ಭಾರತ ಆರಂಭಿಕ ದಾಂಡಿಗರಾದ ಶಿಕರ್ ಧವನ್ ಹಾಗೂ ರೋಹಿತ್ ಶರ್ಮಾ ಕೊಂಚ ಪ್ರತಿರೋಧ ತೋರಿ, ಇಬ್ಬರೂ ಪೆವಿಲಿಯನ್ ಗೆ ಹಿಂದಿರುಗಿದರು. ನಂತರ ಕ್ರೀಸ್‌ಗೆ ಬಂದ ಕಪ್ತಾನ ಕೋಹ್ಲಿ ಹಾಗೂ ರಹಾನೆ ಸೇರಿ 45.3 ಓವರ್‌ಗಳಲ್ಲಿ ಜಯದ ದಡ ಸೇರಿಸಿದರು. ಭಾರತದ ಪರ ರೋಹಿತ್ ಶರ್ಮಾ20, ಶಿಕರ್ ಧವನ್ 34, ಕಪ್ತಾನ ಕೊಹ್ಲಿ 112, ಅಜಿಂಕ್ಯಾ ರಹಾನೆ 79ರನ್‌ಗಳನ್ನು ಗಳಿಸಿದರು. ಆಫ್ರಿಕಾ ಪರ ಮೋರ್ಕೆಲ್ 1, ಪಿಲ್‌ಕುವಾಯೊ 1 ವಿಕೆಟ್ ಪಡೆದರು.

Leave a Reply