ಕೇಪ್‌ಟೌನ್: ಇಲ್ಲಿನ ನ್ಯೂಲ್ಯಾಂಡ್ಸ್ ಕ್ರೀಡಾಂಗಣದಲ್ಲಿ ನಡೆದ‌ ಅಂತಿಮ ಟಿ20 ಪಂದ್ಯದಲ್ಲಿ ಅತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ 7ರನ್‌ಗಳ ಜಯ ದಾಖಲಿಸುವ ಮೂಲಕ ಟಿ20 ಸರಣಿಯಲ್ಲಿ 2-1 ಅಂತರದಲ್ಲಿ ತನ್ನದಾಗಿಸಿಕೊಂಡಿದೆ.

ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ ಆರಂಭಿಕ ಆಟಗಾರ ಶಿಕರದ ಧವನ್ 47 ಹಾಗೂ ಎರಡನೇ ಕ್ರಮಾಂಕದಲ್ಲಿ ಬಂದ ಸುರೇಶ್ ರೈನಾ 43 ಅವರ ಅಬ್ಬರದ ಬ್ಯಾಟಿಂಗ್‌ನಿಂದ ಭಾರತ ಅತಿಥೇಯರಿಗೆ 173ರನ್‌ಗಳ ಸವಾಲನ್ನು ನೀಡಿತ್ತು.

ಭಾರತೀಯ ಸವಾಲನ್ನು ಬೆನ್ನಟ್ಟಿದ ಆಫ್ರಿಕಾನ್ನರಿಗೆ ಆರಂಭಿಕ ಆಘಾತವನ್ನು ಎದುರಿಸಬೇಕಾಯಿತು. ಎರಡನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಜೆಪಿ ಡ್ಯುಮಿನಿ 55 ಹಾಗೂ ಕ್ರಿಶ್ಚಿಯನ್ ಜೊಂಕರ್ 49 ಹೊರತು ಬೇರೆ ಯಾರು ಅಷ್ಟು ಮಟ್ಟದ ಪ್ರತಿರೋಧ ತೋರಿಲ್ಲ. ಹೀಗಾಗಿ ಆಫ್ರಿಕಾಕನ್ನರು 20 ಓವರ್‌ಗಳ ಅಂತ್ಯಕ್ಕೆ 165/6 ಮಾತ್ರ ಸೇರಿಸಲು ಸಾಧ್ಯವಾಯಿತು. ಈ ಮೂಲಕ 7 ರನ್‌ಗಳ ಅಂತರದಿಂದ ಭಾರತ ಸೋಲಿನ ಜೊತರ ಸರಣಿಯನ್ನು ಬಿಟ್ಟುಕೊಟ್ಟಿತು.

ಭಾರತದ ವೇಗಿ ಭುವನೇಶ್ವರ್ ಕುಮಾರ್ ಎರಡು ವಿಕೆಟ್ ಪಡೆದು ಮಿಂಚಿದರು. ಟೆಸ್ಟ್ ಪಂದ್ಯದಲ್ಲಿ ಸೋತ ಭಾರತಕ್ಕೆ ಐತಿಹಾಸಿಕ ಏಕದಿನ ಹಾಗೂ ಟಿ20 ಜಯ ಗೌರವವನ್ನು ಉಳಿಸಿದೆ‌.

Leave a Reply