ಬೈಂದೂರು : ಜಂಇಯ್ಯತುಲ್ ಫ಼ಲಾಹ್ ಬೈ೦ದೂರ್ ತಾಲೂಕು ಇದರ ಉದ್ಘಾಟನೆ ಮತ್ತು ಪದಗ್ರಹಣದ ಅಂಗವಾಗಿ ಜಂಇಯ್ಯತುಲ್ ಫ಼ಲಾಹ್ ಬೈಂದೂರು ಘಟಕ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಇದರ ಜಂಟಿ ಆಶ್ರಯದಲ್ಲಿ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ ಇದರ ಸಹಯೋಗದಲ್ಲಿ ಬೃಹತ್ ಸಾರ್ವಜನಿಕ ರಕ್ತದಾನ ಶಿಬಿರವು ದಿನಾಂಕ 18 ಫೆಬ್ರವರಿ 2018ನೇ ಭಾನುವಾರದಂದು ಬೈ೦ದೂರಿನ ರಾಷ್ಟ್ರೀಯ ಹೆದ್ದಾರಿ 66 ರ ಸೌಖ್ಯ ಎಜುಕೇಷನ್ ಇನ್ಸ್ಟಿಟ್ಯೂಟ್ ನಲ್ಲಿ ನಡೆಯಿತು.

ಬೆಳಗ್ಗೆ 8 ಗಂಟೆಗೆ ನಡೆದ ರಕ್ತದಾನ ಶಿಬಿರವನ್ನು ಮೆಸ್ಕಾಂ ನಿರ್ದೇಶಕರಾದ ಜನಾಬ್ ರಿಯಾಝ್ ಅಹ್ಮದ್ ರವರು ಉದ್ಘಾಟಿಸಿದರು.ಬೈಂದೂರು ಆಸ್ಪತ್ರೆ ವೈದ್ಯಾಧಿಕಾರಿ ಡಾ.ಪ್ರಶಾಂತ್ ಭಟ್ ಆರೋಗ್ಯ ಮಾಹಿತಿ ನೀಡಿದರು.

ಬಳಿಕ 11 ಗಂಟೆಗೆ ನಡೆದ ಸಭಾ ಕಾರ್ಯಕ್ರಮವನ್ನು ಜಂಇಯ್ಯತುಲ್ ಫಲಾಹ್ ಬೈಂದೂರು ತಾಲೂಕು ಸಮಿತಿಯ ಅಧ್ಯಕ್ಷರಾದ ಜನಾಬ್ ಹಸನ್ ಮವಾಡ್ ರವರ ಘನ ಅಧ್ಯಕ್ಷತೆಯಲ್ಲಿ ಬೈಂದೂರು ಶಾಸಕರಾದ ಶ್ರೀ ಕೆ.ಗೋಪಾಲ ಪೂಜಾರಿಯವರು ಉದ್ಘಾಟಿಸಿ ಮಾತನಾಡುತ್ತಾ “ಶಿಕ್ಷಣ ಮತ್ತು ಆರೋಗ್ಯ ಸಮಾಜದ ಎರಡು ಕಣ್ಣುಗಳಿದ್ದಂತೆ.ಶೈಕ್ಷಣಿಕವಾಗಿ ಸಮಾಜ ಜಾಗೃತವಾದಾಗ ಮಾತ್ರ ಬೆಳವಣಿಗೆ ಮತ್ತು ಬದಲಾವಣೆ ಸಾಧ್ಯ” ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ದ.ಕ.ಜಿ ಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ ಕೆ ಶಾಹುಲ್ ಹಮೀದ್ ರವರು ಮಾತನಾಡುತ್ತಾ,ಇದೊಂದು ರಾಜಕೀಯೇತರ ಸಂಸ್ಥೆಯಾಗಿದ್ದು,ಮಾಹಿತಿ ಕೊರತೆಯಿಂದಾಗಿ ದಾರಿ ತಪ್ಪುವ ಸಮುದಾಯದ ಯುವ ಪೀಳಿಗೆಗೆ ಸೂಕ್ತ ಮಾರ್ಗ ದರ್ಶನ ನೀಡಿ ಉಳಿದ ಎಲ್ಲಾ ಸಮಾಜದವರೊಡನೆ ಶಾಂತಿ ನೆಮ್ಮದಿ ಸೌಹಾರ್ದತೆಯಿಂದ ಬಾಳುವಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದರು.

ಸಭಾ ಕಾರ್ಯಕ್ರಮದಲ್ಲಿ ಬೈಂದೂರು ಶಾಸಕರಾದ ಶ್ರೀ ಕೆ.ಗೋಪಾಲ ಪೂಜಾರಿಯವರನ್ನು ಜಂಇಯ್ಯತುಲ್ ಫ಼ಲಾಹ್ ಇದರ ವತಿಯಿಂದ ಸನ್ಮಾನಿಸಲಾಯಿತು.

ರಕ್ತ ದಾನ ಶಿಬಿರದಲ್ಲಿ ಒಟ್ಟು 76 ಜನರು ಪಾಲ್ಗೊಂಡು ರಕ್ತದಾನ ಮಾಡಿದರು.ದಾನಿಗಳಿಂದ ರಕ್ತ ಸಂಗ್ರಹಿಸುವಲ್ಲಿ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ ಬ್ಲಡ್ ಬ್ಯಾಂಕ್ ಅಧಿಕಾರಿಗಳ ತಂಡ ಹಾಗೂ ಸಿಬ್ಬಂದಿ ವರ್ಗದವರು ಸಹಕರಿಸಿದರು.

ಮುಖ್ಯ ಅತಿಥಿಯಾಗಿ ಜನಾಬ್ ಎಂ.ಎ.ಗಫೂರ್,ಶ್ರೀ ತಿಮ್ಮೇಶ್ ಬಿ.ಎನ್,ಜನಾಬ್ ಇಬ್ರಾಹಿಂ ಕೋಡಿಜಾಲ್,ಜನಾಬ್ ಸಲೀಂ ಹಂಡೇಲ್,ಜನಾಬ್ ಶೇಖ್ ಅಬೂ ಮೊಹಮ್ಮದ್,ಜನಾಬ್ ಪರ್ವೇಝ್ ಅಲಿ ಮುಂತಾದ ಹಲವಾರು ಗಣ್ಯರು ವೇದಿಕೆಯಲ್ಲಿ ಉಪಸ್ಥಿತಿಯಿದ್ದರು.ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಇದರ ಅಡ್ಮಿನ್ ಶೇಖ್ ಫಯಾಝ್ ಅಲಿ ನಿರೂಪಣೆ ಮಾಡಿದರೆ,ಜಂಇಯ್ಯತುಲ್ ಫಲಾಹ್ ಬೈಂದೂರು ತಾಲೂಕು ಸಮಿತಿಯ ಕಾರ್ಯದರ್ಶಿಯಾದ ಜನಾಬ್ ಟಿ.ಹುಸೈನ್ ರವರು ವಂದನಾರ್ಪಣೆ ಮಾಡಿದರು.

ರಕ್ತ ದಾನ ಮಾಡಿದ ಸರ್ವ ಸಹೃದಯೀ ದಾನಿಗಳಿಗೂ,ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಪ್ರತಿಯೋರ್ವರಿಗೂ ಹಾಗೂ ಕಾರ್ಯಕ್ರಮದ ಯಶಸ್ಸಿಗಾಗಿ ಹಗಲಿರುಳು ದುಡಿದ ಎಲ್ಲಾ ಕಾರ್ಯಕರ್ತರಿಗೂ,ಸಂಘಟಕರು ಕೃತಜ್ಞತೆಗಳನ್ನು ತಿಳಿಸಿದ್ದಾರೆ.

 

ಪ್ರಕಟಣೆ
ಮೀಡಿಯಾ ಬಳಗ
ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ)

Leave a Reply