ಕಾಶ್ಮೀರಿ ಯುವಕರು ಗನ್ ಮತ್ತು ಕಲ್ಲು ಎಸೆಯುವುದಕ್ಕಿಂತ ಬ್ಯಾಟ್ ಮತ್ತು ಬಾಲ್ ಹಿಡಿಯುದನ್ನು ಆಯ್ಕೆ ಮಾಡಿದರೆ ಕಾಶ್ಮೀರ ಎಷ್ಟೊಂದು ಸುಂದರ ಆಗಬಹುದು ಎಂದು ಖ್ಯಾತ ಕ್ರಿಕೆಟಿಗ ಮುಹಮ್ಮದ್ ಕೈಫ್ ಟ್ವೀಟ್ ಮಾಡಿದ್ದಾರೆ.

ಕಾಶ್ಮೀರಿ ಯುವಕ ಮಂಜುರ್ ಅಹ್ಮದ್ ದಾರ್ ನನ್ನ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಖರೀದಿಸಿದ ಬಳಿಕ ಕಾಶ್ಮೀರಿಗಳು ಬೀದಿಗಳಲ್ಲಿ ಸಂಭ್ರಮಿಸುವ ವಿಡಿಯೋ ಮುಹಮ್ಮದ್ ಕೈಫ್ ಪೋಸ್ಟ್ ಮಾಡಿ ಟ್ವೀಟ್ ಮಾಡಿದ್ದು, ಅವರಿಗೆ ಸರಕಾರ ಕ್ರೆಕೆಟ್ ಆಡಲು ಉತ್ತೇಜನ ಕೊಡಬೇಕು ಎಂದು ಕರೆ ಕೊಟ್ಟಿದ್ದಾರೆ.

ಕಾಶ್ಮೀರದ ಸುಂಬಲ್ ಪಟ್ಟಣದ ದೂರದ ಗ್ರಾಮವಾದ ಸುಗನ್ಫೋರಾ ಗನಾಸ್ಟನ್ಗೆ ಸೇರಿದವರಾಗಿದ್ದಾರೆ ಮಂಜುರ್ ಅಹ್ಮದ್ ದಾರ್. ಅವರನ್ನು 20 ಲಕ್ಷ ರೂಪಾಯಿಗೆ ಆಯ್ಕೆ ಮಾಡಲಾಗಿದೆ. ಈ ಯಶಸ್ಸನ್ನು ಗ್ರಾಮದ ಜನರು ಸ್ಥಳೀಯರು ಬೀದಿಗಳಲ್ಲಿ ನೃತ್ಯ ಮಾಡಿ ಸಂತೋಷ ಆಚರಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

Leave a Reply