ಕಾರವಾರ : ಅಫ್ಘಾನಿಸ್ತಾನದ ಕಾಬೂಲ್ನಲ್ಲಿ ಎರಡು ದಿನಗಳ ಹಿಂದೆ ಮೂವರು ವಿದೇಶಿಯರನ್ನು ಉಗ್ರರು ಅಪಹರಿಸಿ ಹತ್ಯೆ ಮಾಡಿದ್ದರು. ಈ ಪೈಕಿ ಒಬ್ಬರು ಉತ್ತರ ಕನ್ನಡ ಜಿಲ್ಲೆಯ ಕಾರವಾರದವರು ಎಂದು ತಿಳಿದು ಬಂದಿದೆ.

ಸಾಡೆಕ್ಸೋದಲ್ಲಿ ಸಲಾಡ್ ಮೇಕರ್ ಆಗಿ ಕೆಲಸ ಮಾಡುತ್ತಿದ್ದ ಮೂವರು ವಿದೇಶಿಯರನ್ನು ಕಳೆದ ಎರಡು ದಿನದ ಹಿಂದೆ ಉಗ್ರರರು ಅಪಹರಿಸಿ ಕೊಂದು ಹಾಕಿದ್ದರು. ಹತ್ಯೆಯಾದ ಆ ಮೂವರ ಪೈಕಿ ಒಬ್ಬರು ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಪ್ಯಾಟ್ಸನ್ ರೋಡ್ರಿಗ್ಸ್ (39) ಎಂದು ಗುರುತಿಸಲಾಗಿದೆ.

ಪ್ಯಾಟ್ಸನ್ ರೋಡ್ರಿಗ್ಸ್ ಹಾಗೂ ಇಬ್ಬರು ಮಲೇಶಿಯಾ ಮೂಲದ ಸಹೋದ್ಯೋಗಿಗಳು ಕೆಲಸಕ್ಕೆ ಕಾರಿನಲ್ಲಿ ಹೋಗುತ್ತಿದ್ದಾಗ, ಉಗ್ರರು ಅವರನ್ನು ಅಪಹರಿಸಿ ಕಾರಿನಲ್ಲಿಯೇ ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ. ಸ್ಥಳದಲ್ಲಿ ದೊರಕಿರುವ ಗುರುತಿನ ಚೀಟಿಯಿಂದ ಈ ಮೂವರನ್ನು ಗುರುತಿಸಲಾಗಿದೆ. ಶವಗಳನ್ನು ಪರೀಕ್ಷೆ ನಡೆಸಿದ ಬಳಿಕ ಇನ್ನೆರಡು ದಿನಗಳಲ್ಲಿ ಕುಟುಂಬಕ್ಕೆ ಹಸ್ತಾಂತರಿಸಲಾಗುವುದು ಎಂದು ಹೇಳಲಾಗಿದೆ.

ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡು ಹೋಗಿದ್ದರು

ಪ್ಯಾಟ್ಸನ್ ರೋಡ್ರಿಗ್ಸ್ ಮೇ ತಿಂಗಳಲ್ಲಿ ತಾಯಿನಾಡಾದ ಕಾರವಾರಕ್ಕೆ ರಜೆಯಲ್ಲಿ ಬಂದಿದ್ದರು. ಗೋವಾದಲ್ಲಿ ತಮ್ಮ 6ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಸಿದ್ದರು. ಅವಧಿ ಮುಗಿದ ಬಳಿಕ ಜೂನ್ 22ರಂದು ಮರಳಿ ಕಾಬೂಲ್ಗೆ ಹೋಗಿದ್ದಾರೆ. ಇದಾದ ಎರಡು ತಿಂಗಳ ಒಳಗೆ ಕುಟುಂಬಕ್ಕೆ ಪ್ಯಾಟ್ಸನ್ ರೋಡ್ರಿಗ್ಸ್ ಸಾವಿನ ಸುದ್ದಿ ಕೇಳಬೇಕಾಯಿತು.

ಪ್ಯಾಟ್ಸನ್ ರೋಡ್ರಿಗ್ಸ್ ಪ್ರತಿನಿತ್ಯ ಮನಗೆ ಕರೆಮಾಡಿ ಎಲ್ಲರೊಂದಿಗೆ ಮಾತಾಡುತಿದ್ದರು. ಆದಾಗ್ಯೂ ಅವರು ಕೊಲೆಯಾಗುವ ಕೆಲ ಗಂಟೆಗಳ ಮುಂಚೆಯೂ ತಮ್ಮ ಪತ್ನಿ ಜೊತೆಗೆ ಫೋನಿನಲ್ಲಿ ಮಾತನಾಡಿದ್ದಾರೆ. ಆದರೆ ಸಂಜೆ ಕೆಲಸ ಮುಗಿದ ಬಳಿಕ ಎಂದಿನಂತೆ ಕರೆ ಮಾಡುತ್ತಿದ್ದ ಪ್ಯಾಟ್ಸನ್ ಕುಟುಂಬಕ್ಕೆ ಸಾವಿನ ಸುದ್ದಿ ತಿಳಿದು ಆಘಾತಕ್ಕೆ ಒಳಗಾಗಿದ್ದಾರೆ.

Leave a Reply