ಮೊಬೈಲ್ ಬ್ಲಾಸ್ಟ್ ಆಗುವುದನ್ನು ಕೇಳುತ್ತಾ ಇರುತ್ತೇವೆ. ಆದರೆ ಅದಕ್ಕಿಂತಲೂ ಆಘಾತ ಕಾರಿ ಘಟನೆ ಮೂಡಿಗೆರೆ ತಾಲೂಕಿನ ಆಲ್ದೂರಿನಲ್ಲಿ ಈ ಘಟನೆ ನಡೆದಿದೆ.

ನಿನ್ನೆ ಬೆಳಗ್ಗೆ 11 ಗಂಟೆ ಸುಮಾರಿಗೆ ಮಗು ಚಾರ್ಜರ್ ವೈರ್ ಕಡಿದು ವಿದ್ಯುತ್ ಶಾಕ್‍ನಿಂದ ಬಿದ್ದು ಹೊರಳಾಡಿದೆ. ಮನೆಯವರು ಕೂಡಲೇ ಮಗುವನ್ನ ಚಿಕ್ಕಮಗಳೂರಿನ ಜಿಲ್ಲಾಸ್ಪತ್ರೆಗೆ ಕರೆತಂದಿದ್ದಾರೆ.

ಬೆಳಗ್ಗೆಯಿಂದಲೂ ಮಗುವಿಗೆ ಚಿಕಿತ್ಸೆ ನೀಡಲಾಗಿದೆ. ಆದರೆ ಸಂಜೆ ವೇಳೆಗೆ ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದೆ. ಆಲ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಮನೆಯಲ್ಲಿರುವ ಮಕ್ಕಳ ಬಗ್ಗೆ ಎಷ್ಟು ಕಾಳಜಿ ವಹಿಸಿದರೂ ಸಾಲದು.

Leave a Reply