ಇತ್ತೀಚೆಗೆ ಅಲ್ಲಲ್ಲಿ ಮಕ್ಕಳನ್ನು ಕಳ್ಳತನ ಮಾಡುವ ಸುದ್ದಿಗಳು ಸಾಮಾಜಿಕ ಮಾಧ್ಯಮದ ಮೂಲಕ ವ್ಯಾಪಕವಾಗಿ ಹರಡುತ್ತಿದ್ದು, ಕಣ್ಣಾರೆ ಕಂಡವರು ಯಾರು ಇಲ್ಲ ಬರೀ ಊಹಾಪೋಹಗಳಷ್ಟೇ ಎಂದು ಜನರು ಮಾತಾನಾಡಿಕೊಳ್ಳುತ್ತಿದ್ದರು.‌ ಇದರ ಪರಿಣಾಮ ಕೇರಳದಲ್ಲಿ ಹಲವಾರು ಭಿಕ್ಷುಕರನ್ನು ಹಿಡಿದು ಕಟ್ಟಿ ಹಾಕಿದ ಪ್ರಸಂಗವು ನಡೆದಿದೆ.‌

ಆದರೆ ಇಲ್ಲೊಬ್ಬ ಮಗುವನ್ನು ಅಪಹರಣಗೈದ ದೃಶ್ಯ ಬಹಳ ಸ್ಪಷ್ಟವಾಗಿ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮುಂಬಯಿ ಸಾಕಿನಾಕಾ ಪ್ರದೇಶದಲ್ಲಿ ಫೆಬ್ರವರಿ 23ರಂದು ಅಪರಿಚಿತ ವ್ಯಕ್ತಿಯೊಬ್ಬ ಮಗುವೊಂದನ್ನು ಎತ್ತಿಕೊಂಡು ಪರಾರಿಯಾದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು,‌ ಬಳಿಕ ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಎರಡೂವರೆ ವರ್ಷ ಪ್ರಾಯದ ಶಿರೀನ್ ಫಾತಿಮ ಎಂಬ ಮಗು ಅಂಗಡಿಯಿಂದ ಹೊರ ಬಂದಾಗ ಕಪ್ಪು ಅಂಗಿ ಧರಿಸಿದ ವ್ಯಕ್ತಿಯೊಬ್ಬ ಆ ಮಗುವನ್ನು ಎತ್ತಿಕೊಂಡು ಹೋಗುತ್ತಾನೆ.

ಇನ್ನೂ ಮಗು ಕಾಣೆಯಾದ ಕುರಿತು ಪೋಷಕರು ಪೋಲಿಸರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದು, ತಕ್ಷಣ ಎಚ್ಚೆತ್ತುಕೊಂಡ ಪೋಲಿಸರು ಸಿಸಿಟಿವಿ ಮುಖಾಂತರ ಜಾಡು ಹಿಡಿದು ಹೊರಟ್ಟಿದ್ದಾರೆ.‌‌

ಮುಂಬಯಿ ಪೋಲಿಸರ ಚಾಣಾಕ್ಷತನದಿಂದ ಅಪಹರಣಕಾರನ್ನು ಮಗುವಿನ ಸಮೇತ ಹಿಡಿದಿದ್ದಾರೆ. ಆದರೆ ಮಗುವನ್ನು ಅಪಹರಣ ಮಾಡಿದುದರ ಉದ್ದೇಶ ಇನ್ನಷ್ಟೆ ತನಿಖೆಯ ಮೂಲಕ ಹೊರಬರಬೇಕಾಗಿದೆ.‌ ಒಟ್ಟಿನಲ್ಲಿ ಈ ಘಟನೆಯೂ ಮಕ್ಕಳ ಅಪಹರಣಕಾರರು ಇರುವ ಸಂಶಯಕ್ಕೆ ಇನ್ನಷ್ಟು ಪುಷ್ಟಿ ನೀಡಿದೆ.

Leave a Reply