ವಿಜಯವಾಡ ಆಸ್ಪತ್ರೆಯಲ್ಲಿ ಅಧ್ಬುತ ಘಟನೆ ನಡೆದಿದೆ. ಹುಟ್ಟುವಾಗ ಕೇವಲ 450 ಗ್ರಾಂಗಳಷ್ಟು ತೂಕ ಹೊಂದಿದ್ದ ನವಜಾತ ಶಿಶು ನಾಲ್ಕು ತಿಂಗಳು ಆಸ್ಪತ್ರೆಯಲ್ಲಿ ಕಳೆದು ಇದೀಗ ಆರೋಗ್ಯಕರವಾಗಿ ಡಿಸ್ಚಾರ್ಜ್ ಆಗಿದೆ.

ವೈದ್ಯರ ನಿರಂತರ ಮೇಲ್ನೋಟದಿಂದ ಮಗುವಿನ ಆರೈಕೆ ನಡೆದಿದ್ದು, ವೈದ್ಯರ ಪ್ರಯತ್ನಕ್ಕೆ ಫಲ ಸಿಕ್ಕಿದೆ.ಹುಟ್ಟಿದಾಗ ಇನ್ನು ಬದುಕುವುದು ಕಷ್ಟ ಎಂದಿದ್ದ ಮಗು ಈಗ 2.2kg ತೂಗುತ್ತದೆ.

ರಮಃ ಶ್ರೀಸಾತ್ಯ ಮತ್ತು ಕಾಶಿ ವಿಶ್ವನಾಥ್ ದಂಪತಿಯ ಈ ಅಧ್ಬುತ ಮಗು ವಿಜಯವಾಡದ ರೇನ್ಬೋ ಚಿಲ್ಡ್ರನ್ಸ್ ಹಾಸ್ಪಿಟಲ್ನಲ್ಲಿ ಸೆಪ್ಟೆಂಬರ್ 27, 2017 ರಂದು ಜನಿಸಿತ್ತು.

ಎರಡು ತಿಂಗಳು ಮುಂಚಿತವಾಗಿ ಪ್ರಸವ ನಡೆದ ಪರಿಣಾಮವಾಗಿ ಮಗು ಹುಟ್ಟಿದಾಗ ಕೇವಲ 450 ಗ್ರಾಂಗಳಷ್ಟು ತೂಕ ಇತ್ತು.

“ಮಗುವಿನ ಅಂಗಗಳು ಹಾಗೂ ಪಾದಗಳು ಗಾತ್ರದಲ್ಲಿ ತುಂಬಾ ಚಿಕ್ಕದಾಗಿತ್ತು. ಇಂತಹ ಮಕ್ಕಳು ಬದುಕುಳಿಯುವುದು ತೀರಾ ಕಷ್ಟ.
ಕೇವಲ 1.5 ಪ್ರತಿಶತದಷ್ಟು ಶಿಶುಗಳು ಹೀಗೆ ಹುಟ್ಟುತ್ತವೆ. ಹೇಗಾದರೂ, ನಮ್ಮ ವೈದ್ಯರ ಪ್ರಯತ್ನದಿಂದ ಮಗು ಬದುಕುಳಿಯಲು ಸಾಧ್ಯ ಆಗಿದೆ. ಆದ್ದರಿಂದ ಈ ಮಗು ಅದ್ಭುತ ಮಗು. ನಮ್ಮ ರಾಜ್ಯದಲ್ಲಿ ಇದು ಮೊದಲ ಪ್ರಕರಣವಾಗಿದೆ “ಎಂದು ರೇನ್ಬೋ ಚಿಲ್ಡ್ರನ್ಸ್ ಆಸ್ಪತ್ರೆಯ ಡಾ. ದಿನೇಶ್ ಕುಮಾರ್ ಚಿರ್ಲಾ ಹೇಳಿದ್ದಾರೆ.

Leave a Reply