ವಾಷಿಂಗ್ಟನ್: ಅಕ್ರಮ ವಲಸಿಗರ ಕುಟುಂಬಗಳನ್ನು ಪ್ರತ್ಯೇಕಿಸುವ ಕಾನೂನಿನ ವಿರುದ್ಧ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ಈ ಕಾನೂನಿಗೆ ಅಂತ್ಯ ಹಾಡಲು ಅಮೇರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶಿಸಿದ್ದಾರೆ.

ಅಮೇರಿಕಾ ಮೆಕ್ಸಿಕೋ ಗಡಿಬಾಗದಲ್ಲಿ ಅಕ್ರಮ ವಲಸಿಗರ ಸಂಖ್ಯೆ ಹೆಚ್ಚಲವಾಘುತ್ತಿದ್ದಂತೆ ಇವರ ವಿರುದ್ಧ ಅಮೇರಿಕ ತೀವ್ರ ಕ್ರಮ ಕೈಗೊಂಡಿತ್ತು. ಮಕ್ಕಳನ್ನು ಕುಟುಂಬದಿಂದ ಬೇರ್ಪಡಿಸುವ ಅಮಾನವೀಯ ಕೃತ್ಯಕ್ಕೆ ಇಳಿದಿತ್ತು.

ಇದರ ವಿರುದ್ಧ ಪ್ರಥಮ ವನಿತೆ ಮೆಲಾನಿಯಾ ಟ್ರಂಪ್ ಸಹಿತ ಅನೇಕರಿಂದ ತೀವ್ರ ವಿರೋಧ ಕೇಳಿ ಬಂದಿತ್ತು. ಪೋಷಕರಿಂದ ಮಕ್ಕಳನ್ನು ಬೇರ್ಪಡಿಸುವ ಕ್ರೂರತನದಿಂದ ಮಕ್ಕಳ ಆಕ್ರಂದನದ ದೃಶ್ಯಗಳು ಬಹಿರಂಗವಾಗಿ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಚರ್ಚಿತವಾಗಿತ್ತು.

ಹೊಸ ಆದೇಶದನುಸಾರ ಪೋಷಕರಿಂದ ಮಕ್ಕಳನ್ನು ಬೇರ್ಪಡಿಸುವುದಿಲ್ಲ ಆದರೆ ವಲಸಿಗರನ್ನು ಫೆಡರಲ್ ಕಸ್ಟಡಿಯಲ್ಲಿರಿಸಿ ಅಕ್ರಮ ವಲಸಿಗರ ವಿರುದ್ಧದ ಕಾನೂನು ಕ್ರಮಗಳನ್ನು ಜರುಗಿಸಲಾಗುವುದು. ಗಡಿಯ ಭದ್ರತೆಯನ್ನು ಪ್ರಬಲಗೊಳಿಸುವುದರ ಜೊತೆಗೆ ಕುಟುಂಬದೊಂದಿಗಿರಲು ಅವರಿಗೆ ಅವಕಾಶ ನೀಡಲಾಗುವುದು ಎಂದು ಟ್ರಂಪ್ ಆದೇಶಕ್ಕೆ ಸಹಿ ಹಾಕುತ್ತಾ ಸ್ಪಷ್ಟಪಡಿಸಿದರು.

Leave a Reply