ಮಿಚಿಗನ್ – ಅಮೇರಿಕಾದ ರೂಪದರ್ಶಿಯೊಬ್ಬಳು ತನ್ನ ಪತಿ, ಮತ್ತು ಇಬ್ಬರು ಮಕ್ಕಳ ಮೇಲೆ ಗುಂಡು ಹಾರಿಸಿ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ.

ಲಾರೇನ್ ಸ್ಟೌರ್ಟ್ ತನ್ನ ಪತಿ ಡೇನಿಯಲ್ (42), ಪುತ್ರ ಸ್ಟೀವನ್ (27) ಮತ್ತು ಪುತ್ರಿ ಬೇಥಾನಿ(24) ಅವರ ತಲೆಗಳಿಗೆ ಗುಂಡು ಹಾರಿಸಿದ್ದು, ಬಳಿಕ ತಾನೂ ಅದೇ ಗನ್‍ನಿಂದ ಗುಂಡು ಹಾರಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

Lauren Stuart shot and killed husband Daniel Stuart (pictured)
ಡೇನಿಯಲ್

ಮಿಚಿಗನ್‍ನ ಕೀಗೋ ಹಾರ್ಬರ್ ಪ್ರದೇಶದ ಮನೆಯಲ್ಲಿ ನಡೆದ ಈ ಘಟನೆ ನಡೆದಿದ್ದು ಪತಿ ಪತ್ನಿ ಅನ್ಯೋನ್ಯವಾಗಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.

Related image

ಪತಿ ಪತ್ನಿ ಮಧ್ಯೆ ಯಾವುದೇ ವಿರಸ ಇರಲಿಲ್ಲ. ಇಂತಹ ದೊಡ್ಡ ಆಘಾತಕಾರಿ ಹೆಜ್ಜೆ ಇಡಲು ಕಾರಣವೇನಿರಬಹುದು ಎಂದು ಕುಟುಂಬದ ಸದಸ್ಯರು ದಿಗಿಲು ಗೊಂಡಿದ್ದಾರೆ.

ಪೊಲೀಸರು ಕೊಲೆ ಮತ್ತು ಆತ್ಮಹತ್ಯೆ ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Leave a Reply