ನೀವು ಗಲ್ಫ್ ರಾಷ್ಟ್ರಕ್ಕೆ ಎಂದಾದರು ಹೋಗಿದ್ದೀರಾ? ಗಲ್ಫ್ ಎಂದರೆ ಯುಎಇ, ಸೌದಿ, ಕತಾರ್, ಬಹರೈನ್, ಕುವೈಟ್, ಓಮನ್ ಹೀಗೆ ಹಲವಾರು ಅರಬ್ ರಾಷ್ಟ್ರ್ರಗಳು. ಒಂದು ವೇಳೆ ಹೋಗಿಲ್ಲ ಎಂದಾದರೆ ಹೋದವರಲ್ಲಿ ಕೇಳಿ ನೋಡಿ ಅಲ್ಲಿ ನಮ್ಮ ಭಾರತೀಯರು ಹೇಗಿರುತ್ತಾರೆ ಎಂದು.

ಒಂದೇ ಕೋಣೆ, ಒಂದೇ ಬಚ್ಚಲು ಮನೆ, ಒಂದೇ ತಟ್ಟೆ, ಒಟ್ಟಿಗೆ ಕೂತು ಊಟ ಇದಕ್ಕಿಂತ ಹೆಚ್ಚಾಗಿ ಇನ್ನೇನು ಬೇಕು? ಒಂದೇ ಮನೆಯ ಅಣ್ಣ ತಮ್ಮಂದಿರಂತೆ ಜಾತಿ-ಧರ್ಮದ ಬೇಧಭಾವ ಮರೆತು ಭಾರತೀಯರಾಗಿ ಇರುತ್ತಾರೆ. ಯಾಕೆಂದರೆ ಅಲ್ಲಿ ಅವರು ಯಾವ ರಾಜಕಾರಣಿಗಳ ಕೈ ಗೊಂಬೆಯಾಗಿ ಬದುಕಲು ಅವಕಾಶವಿರುವುದಿಲ್ಲ. ಅವರವರ ಉದ್ಯೋಗದಲ್ಲಿ ಕಾರ್ಯನಿರತರಾಗಿರುತ್ತಾರೆ. ಆದರೆ ನಮ್ಮ ದೇಶದ ವಿಚಾರಕ್ಕೆ ಬಂದರೆ ಮಾತ್ರ ಅವನು ದೇಶಗದ್ರೋಹಿ, ಪಾಕಿಸ್ತಾನಿ, ಯಹೂದಿ, ಸಂಘಟಕ ಇತ್ಯಾದಿ ಇತ್ಯಾದಿ ಮಾತುಗಳನ್ನು ಕೇಳಬೇಕಾಗುತ್ತದೆ.

ಗಲ್ಫ್‌ನಲ್ಲಿ ಜೀವಿಸುತ್ತಿರುವ ಪ್ರತಿಯೊಬ್ಬರನ್ನು ಹಿಡಿದು ಸರ್ವೆ ಮಾಡಿದರೂ ಅವರ ಬಾಯಿಂದ ಬರುವ ಮಾತು ನಾವು ಭಾರತೀಯರು ಶಾಂತಿಪ್ರಿಯರು ಎಂದು ಮಾತ್ರ ಯಾಕೆಂದರೆ ಅಲ್ಲಿ ಅವರಿಗೆ ಜೀವನದ ಬೆಲೆ ಏನೆಂಬುದು ತಿಳಿದಿರುತ್ತದೆ. ಅಲ್ಲಿ ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಎಂಬ ಭೇದಭಾವ ಯಾವುದೇ ಕಾರಣಕ್ಕೂ ಬರುವುದೇ ಇಲ್ಲ.

ಅವರಿಂದ ನಾವು ಬಹಳಷ್ಟು ಕಲಿಯೋದಿದೆ. ನೈಜ್ಯ ದೇಶಪ್ರೇಮ ಎಂದರೆ ಏನೆಂದು ಅವರು ತೋರಿಸಿಕೊಡುತ್ತಾರೆ. ಊಟದ ವಿಚಾರದಲ್ಲಿ, ಬಟ್ಟೆಯ ವಿಚಾರದಲ್ಲಿ, ಪರಸ್ಪರ ಆರ್ಥಿಕ ಸಹಾಯ ಮಾಡುವ ವಿಚಾರದಲ್ಲಿ ತಾರತಮ್ಯ ಉಂಟುಮಾಡುವುದಿಲ್ಲ. ಅಷ್ಟೇ ಯಾಕೆ ಅವರು ಪ್ರತಿನಿತ್ಯ ತಮ್ಮ ದೇಶದ ಬಗ್ಗೆ ಯೋಚಿಸುತ್ತಿರುತ್ತಾರೆ. ಇದ್ದಕ್ಕಿಂತ ದೂಡ ದೇಶಪ್ರೇಮ ಇನ್ನೊಂದು ಇದೆಯೇ ಮಿತ್ರರೇ?

ನಾವು ಕೂಡ ಯೋಚಿಸಬೇಕಾಗಿದೆ, ನಾವು ಬದಲಾಗೇಬೇಕಾಗಿದೆ. ನವ ಭಾರತವನ್ನು ನಿರ್ಮಾಣ ಮಾಡಲು ನಾವೆಲ್ಲೇರು ಮೊದಲು ನಮ್ಮ ನಮ್ಮ ಧರ್ಮವನ್ನು ಸರಿಯಾಗಿ ಪಾಲಿಸಿ ಒಂದೊಳ್ಳೆಯ ಭಾರತೀಯರಾಗಬೇಕಾಗಿದೆ. ಆ ದಿನವೇ ನಮ್ಮ ದೇಶ ಇಡೀ ಪ್ರಪಂಚದಲ್ಲೇ ವಿಶ್ವಗುರು ಆಗಲು ಸಾಧ್ಯ!

ಓರ್ವ ಅನಿವಾಸಿ ಭಾರತೀಯ

Leave a Reply