ಆಗ್ರಾದಲ್ಲಿ ಭಾರತದ ಐತಿಹಾಸಿಕ ಅಮೃತಶಿಲೆ ತಾಜ್ ಮಹಲನ್ನು ಮೊಘಲ್ ಚಕ್ರವರ್ತಿ ಶಾಜಹಾನ್ ತನ್ನ ಪ್ರೀತಿಯ ಪತ್ನಿ ಮುಮ್ತಾಜ್ ನೆನಪಿಗಾಗಿ ಕಟ್ಟಿದರು.

ಬಿಹಾರದ ‘ಪರ್ವತ ಮನುಷ್ಯ’ ದಶರಥ ಮಾಂಝಿ ತನ್ನ ಹಳ್ಳಿಯ ಮತ್ತು ಆಸ್ಪತ್ರೆಯ ನಡುವಿನ ಅಂತರವನ್ನು ಕಡಿಮೆ ಮಾಡಲು ಸುತ್ತಿಗೆಯನ್ನು ಮತ್ತು ಉಳಿಗೆಯನ್ನು ಬಳಸಿಕೊಂಡು ಒಂದು ಗುಡ್ಡದ ನಡುವೆ ಮಾರ್ಗವನ್ನು ಕೆತ್ತಿದರು. ಮಾಂಝಿಯವರ ಪತ್ನಿಗೆ ದಾರಿ ಇಲ್ಲದೆ ಆಸ್ಪತ್ರೆಗೆ ತಲುಪಲು ಸಾಧ್ಯವಾಗಲಿಲ್ಲ. ಆ ಕಾರಣದಿಂದ ಪತ್ನಿ ಮರಣ ಹೊಂದಿದರು.

ಇದೀಗ ಇಂತಹ ಪಟ್ಟಿಗೆ ಹೊಸ ಹೆಸರು ಸೇರ್ಪಡೆ ಆಗಿದೆ. ತೆಲಂಗಾಣದಲ್ಲಿ ನಿವೃತ್ತ ಸರ್ಕಾರಿ ಉದ್ಯೋಗಿ ಪತ್ನಿಯ ನೆನಪಿಗಾಗಿ ದೇವಾಲಯ ಕಟ್ಟಿದ್ದಾರೆ.

ತೆಲಂಗಾಣ ವಿದ್ಯುತ್ ಇಲಾಖೆಯ ನಿವೃತ್ತ ಉದ್ಯೋಗಿ ಚಂದ್ರ ಗೌಡ ಅವರು ಅನಾರೋಗ್ಯದಿಂದ ಮೃತಪಟ್ಟ ಪತ್ನಿ ರಾಜಮಣಿಯ ನೆನಪಿಗಾಗಿ ದೇವಾಲಯ ನಿರ್ಮಿಸಿದ್ದಾರೆ.
ತೆಲಂಗಾಣದ ಸಿದ್ದಿಪೇಟ್ ಜಿಲ್ಲೆಯ ಗೋಸನಪಲ್ಲಿ ಗ್ರಾಮದ ತನ್ನ ಜಮೀನಿನಲ್ಲಿ ಪತ್ನಿಯ ವಿಗ್ರಹ ಸ್ಥಾಪಿಸಿ ಚಂದ್ರ ಅವರು ಈ ದೇವಾಲಯ ನಿರ್ಮಿಸಿದ್ದಾರೆ.

ಈ ದೇವಾಲಯವು ಈಗ ದೂರದ ಹಳ್ಳಿಯ ಜನರಿಗೆ ಒಂದು ಆಕರ್ಷಣೆಯ ಕೇಂದ್ರವಾಗಿದೆ. ಗೌಡರ ಪತ್ನಿಯ ಮೇಲಿನ ಪ್ರೀತಿಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

Leave a Reply