ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಜೈಲಿನಲ್ಲಿ ಇರುವ ಶೇ. 75 ಮಂದಿ ಬಿಲ್ಲವ ಸಮುದಾಯದವರು. ಮಂಗಳೂರಿನಲ್ಲಿ ಇತ್ತೀಚಿಗೆ ನಡೆದ ಕೊಲೆಯಲ್ಲೂ ಬಿಲ್ಲವ ಯುವಕರು ಆರೋಪಿ ಗಳಾಗಿದ್ದರು ಎಂದು ಮೇಯರ್ ಕವಿತಾ ಸನಿಲ್ ಖೇದ ವ್ಯಕ್ತ ಪಡಿಸಿದ್ದಾರೆ.

ಅವರು ಬನ್ನೇರು ಘಟ್ಟ ರಸ್ತೆಯಲ್ಲಿ ಬಿಲ್ಲವ ಭವನದಲ್ಲಿ ಬಿಲ್ಲವ ಅಸೋಸಿಯೇಶನ್ ಹಮ್ಮಿಕೊಂಡ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು.

ಬಿಲ್ಲವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೊಡ್ಡ ಸಮುದಾಯ. ಆದರೆ ರಾಜಕೀಯವಾಗಿ ವಂಚಿತ ರಾಗಿದ್ದಾರೆ. ಬಿಲ್ಲವ ಯುವಕರು ಯಾವುದು ಸರಿ ಯಾವುದು ತಪ್ಪು ಮತ್ತು ಯಾವುದು ನ್ಯಾಯ ಮತ್ತು ಯಾವುದು ಅನ್ಯಾಯ ಎಂಬುದನ್ನು ಗುರುತಿಸಬೇಕು. ಬಿಲ್ಲವ ಸಮುದಾಯ ಒಗ್ಗಟ್ಟಾಗಬೇಕು ಎಂದು ಕರೆ ನೀಡಿದರು.

Leave a Reply