ಪ್ರೀತಿ ಪ್ರೇಮದ ಬಲೆಯಲ್ಲಿ ಸಿಲುಕಿದ ಯುವ ಪ್ರೇಮಿಗಳು ಸಿನಿಮಾ, ಪಾರ್ಕು ಬೀಚ್ ಅಂತ ತಿರುಗುವುದು ಎಲ್ಲ ಕಡೆ ಇದ್ದದ್ದೇ. ಪ್ರೀತಿ ಪ್ರೇಮದ ಹುಚ್ಚಿನಲ್ಲಿ ಇಂತಹ ಸಾರ್ವಜನಿಕ ಪ್ರದೇಶಗಳಲ್ಲಿ ಕೆಲವರು ಅತಿರೇಕವನ್ನು ಪ್ರದರ್ಶಿಸುವುದು ಇದೆ. ಆದರೆ ಸಭ್ಯ ಸಮಾಜಕ್ಕೆ ಇದು ಪಥ್ಯವಾಗುವುದಿಲ್ಲ.

ಇದೆ ವಿಷಯದಲ್ಲಿ ಹಲವು ಕಡೆ ಜಗಳ ಕೇಸ್ ಎಲ್ಲವು ಆಗುತ್ತದೆ. ಇಂತಹ ರಗಳೆಯನ್ನು ತಪ್ಪಿಸಲು ಪಾರ್ಕೊಂದು ಹೊಸ ಕ್ರಮ ಕೈಗೊಂಡಿದೆ. ಅದರೊಳಗೆ ಪ್ರವೇಶಿಸಲು ಮದುವೆ ಪ್ರಮಾಣ ಪತ್ರ ಕಡ್ಡಾಯ ಮಾಡಿದೆ.

ಕೊಯಮತ್ತೂರು ತಮಿಳುನಾಡು ಕೃಷಿ ವಿಶ್ವವಿದ್ಯಾಲಯ ಅವಿವಾಹಿತ ಜೋಡಿಗಳ ಪಾರ್ಕ್ ಪ್ರವೇಶ ನಿಲ್ಲಿಸಲು ಅದರ ಬೊಟಾನಿಕಲ್ ಗಾರ್ಡನ್ ಗೆ ಬರುವ ಜನರಲ್ಲಿ ಮದುವೆ ಪ್ರಮಾಣ ಪತ್ರ ಕೇಳಲು ಭದ್ರತಾ ಸಿಬ್ಬಂದಿಗಳಿಗೆ ಆದೇಶಿಸಿದೆ.

ಇದಲ್ಲದೆ, ಮನರಂಜನೆಗಾಗಿ ಸಾರ್ವಜನಿಕರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಮಕ್ಕಳೊಂದಿಗೆ ಮಾತ್ರ ವಿವಾಹಿತ ದಂಪತಿಗಳು ಒಳಗೆ ಪ್ರವೇಶಿಸಬಹುದಾಗಿದೆ.

ಸ್ಥಳೀಯರು ಮತ್ತು ಅದರ ವಿದ್ಯಾರ್ಥಿ ಜೋಡಿಗಳು ಆ ಪಾರ್ಕನ್ನು ಮೋಜಿನ ತಾಣವಾಗಿ ಬಳಸುವ ಬಗ್ಗೆ ದೂರುಗಳು ಬಂದಿತ್ತು. ಈ ನಿಟ್ಟಿನಲ್ಲಿ ವಿಶ್ವವಿದ್ಯಾನಿಲಯವು ಈ ನಿರ್ಧಾರ ತೆಗೆದುಕೊಂಡಿದೆ.

Leave a Reply