ಆಕಾಶದಲ್ಲಿ ಮದುವೆ, ಸಮುದ್ರದ ಮಧ್ಯೆ ನೀರಿನಲ್ಲಿ ಮದುವೆ, ಕಂಪ್ಯೂಟರ್ ಮೂಲಕ ಆನ್ಲೈನ್ ಮದುವೆ ಹೀಗೆ ವಿವಿಧ ಮದುವೆಯನ್ನು ನೀವು ಕೇಳಿದ್ದೀರಿ. ಆದರೆ ಶೌಚಾಲಯದಲ್ಲಿ ಮದುವೆ ಆದದ್ದನ್ನು ನೀವು ನೋಡಿದ್ದೀರಾ? ಅಥವಾ ಕೇಳಿದ್ದೀರಾ.. ಹಾಗಾದರೆ ಇಲ್ಲೊಂದು ಮದುವೆ ಶೌಚಾಯಲದಲ್ಲಿ ನಡೆದಿದೆ.

ಅಕ್ಷಯ್ ಕುಮಾರ್ ನಟಿಸಿದ “ಟಾಯ್ಲೆಟ್” ಚಲನಚಿತ್ರ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಇದೀಗ ಸಿನೆಮಾ ಶೈಲಿಯಲ್ಲಿ ಯುವಕ ಮತ್ತು ಯುವತಿ ಶೌಚಾಲಯದಲ್ಲಿ ಮದುವೆಯಾದ ಘಟನೆ ಛತ್ತೀಸ್‍ಘಢ ರಾಜ್ಯದ ಬಿಸಲಾಪುರದಲ್ಲಿ ನಡೆದಿದೆ.

ಇಬ್ಬರಿಗೂ ಪರಸ್ಪರ ಮದುವೆಯ ಮಾತುಕತೆ ನಡೆದಿತ್ತು. ಆದರೆ ಆತನ ಮನೆಯಲ್ಲಿ ಶೌಚಾಲಯ ಇಲ್ಲ ಎಂದು ಯುವತಿ ಮದುವೆಗೆ ನಿರಾಕರಿಸಿದ್ದಳು. ಮಾತ್ರವಲ್ಲ ಮನೆಯಲ್ಲಿ ಶೌಚಾಲಯ ಕಟ್ಟಿಸಿದರೆ ತಾನು ಮದುವೆ ಆಗುವುದಾಗಿ ಬೇಡಿಕೆ ಇಟ್ಟಿದ್ದಳು. ಅದರಂತೆ ಯುವಕ 2017 ಮೇ ನಲ್ಲಿ ಸರ್ಕಾರಕ್ಕೆ ಶೌಚಾಲಯ ನಿರ್ಮಾಣಕ್ಕಾಗಿ ಪಂಚಾಯತ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ಸಲ್ಲಿಸಿದ ಬಳಿಕ ಸರ್ಕಾರದ ಸಹಾಯ ಧನದಿಂದ ಅವರು ಜೂನ್‍ನಲ್ಲಿಯೇ ಶೌಚಾಲಯ ನಿರ್ಮಿಸಿದ್ದರು. ಇದೀಗ ಅವರಿಬ್ಬರೂ ಅದೇ ಕಾರಣಕ್ಕೆ ಮದುವೆಯನ್ನು ಶೌಚಾಲಯದಲ್ಲೇ ಮಾಡಿದ್ದಾರೆ.

ಜನವರಿ 24ರಂದು ತಂದೆ ತಾಯಿಯ ಮೇರೆಗೆ ಸರ್ಕಾರಿ ಅಧಿಕಾರಿಗಳ ಮುಂದೆ ನಗರದ ಸಾರ್ವಜನಿಕ ಶೌಚಾಲಯದಲ್ಲಿ ಮದುವೆ ಆಗಿದ್ದಾರೆ. ಪ್ರತಿ ಮನೆಯಲ್ಲಿ ಶೌಚಾಲಯವಿದ್ದರೆ ಯಾವುದೇ ರೋಗಗಳು ಬರುವುದಿಲ್ಲ. ಶೌಚಾಲಯ ನಿರ್ಮಾಣ ಮಾಡುವುದರಿಂದ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯದ ಪ್ರಕರಣಗಳು ಕಡಿಮೆ ಆಗಲಿವೆ ಎಂದು ನವದಂಪತಿ ಹೇಳಿದ್ದು ಮನೆಗೊಂದು ಶೌಚಾಲಯ ನಿರ್ಮಿಸಿಕೊಳ್ಳಬೇಕು ಎಂಬ ಸಂದೇಶವನ್ನು ನೀಡಿದೆ.

Leave a Reply