ಟೋಕಿಯೊ: 2020ರ ಒಲಿಂಪಿಕ್ಸ್ ಗೆ ಪೂರ್ವಭಾವಿಯಾಗಿ ಮೂಲಭೂತ ಸೌಕರ್ಯಗಳನ್ನು ಏರ್ಪಡಿಸುವ ಗಡಿಬಿಡಿಯಲ್ಲಿದೆ ಜಪಾನ್.

ಇದರ ಭಾಗವಾಗಿ ಸಂಚರಿಸುವ ಮಸೀದಿಯನ್ನು ನಿರ್ಮಾಣ ಮಾಡಿ ಸುದ್ದಿಯಲ್ಲಿದೆ ಜಪಾನ್. ಬಿಳಿ-ನೀಲಿ ಬಣ್ಣದ ಟ್ರಕ್ಕನ್ನು ಒಂದನ್ನು ಮಸೀದಿಯಾಗಿ ಜಪಾನ್ ಪರಿವರ್ತಿಸಿದೆ.

ಒಲಿಂಪಿಕ್‍ಗೆ ಬರುವವರಿಗೆ ಪ್ರಾರ್ಥನೆಗೆ ಅಡ್ಡಿಯಾಗಬಾರದು ಎಂಬ ಉದ್ದೇಶದಿಂದ ಟ್ರಕ್‍ನ್ನು ಮಸೀದಿಯನ್ನಾಗಿಸಿದೆ. ಹೀಗೆ ಸಂಚರಿಸುವ ಮಸೀದಿ ಅಸ್ತಿತ್ವಕ್ಕೆ ಬಂದಿದೆ.

ಈ ಸಂಚರಿಸುವ ಮಸೀದಿಯಲ್ಲಿ ಏಕಕಾಲಕ್ಕೆ 9 ಮಂದಿಗೆ ನಮಾಝ್ ನಿರ್ವಹಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಯಶು ಪ್ರೋಜಕ್ಟ್ ಎಂಬ ಕಂಪೆನಿಯು ಈ ಸಂಚರಿಸುವ ಮಸೀದಿಯನ್ನು ನಿರ್ಮಾಣ ಮಾಡಿದೆ. ಒಲಿಂಪಿಕ್ಸ್ ಕಾಣಲು ಜಪಾನಿಗೆ ಬರುವ ವಿಶ್ವಾಸಿಗಳಿಗೆ ಯಾವುದೇ ರೀತಿಯ ತೊಂದರೆ ಆಗಬಾರದೆನ್ನುವ ಕಾರಣದಿಂದ ಸಂಚರಿಸುವ ಮಸೀದಿಯನ್ನು ಉಪಯೋಗಿಸಬಹುದಾಗಿದೆ ಎಂದು ಕಂಪೆನಿ ಸಿಇಒ ಯಾಸುಹುರು ಇನೋನ್ ಹೇಳಿದರು.

ಯೋಜನೆಯ ಅಂಗವಾಗಿ ಮೊದಲ ಮಸೀದಿಯನ್ನು ಟೋಕಿಯೊದ ಸ್ಟೇಡಿಯಂನ ಹೊರಗೆ ಉದ್ಘಾಟನೆ ನಡೆಸಲಾಗಿದೆ. ಒಲಿಂಪಿಕ್ಸ್ ಗೆ ಮೊದಲು ಇನ್ನು ಹೆಚ್ಚು ಸಂಚರಿಸುವ ಮಸೀದಿಗಳು ಅಸ್ತಿತ್ವ ಕಾಣಲಿವೆ. ಈ ಕಂಪೆನಿ ಒಲಿಂಪಿಕ್ಸ್ ಗೆ ಮೊದಲು ಬಹಳಷ್ಟು ಸಂಚರಿಸುವ ಮಸೀದಿ ನಿರ್ಮಾಣಗೊಳಿಸುವ ಸಿದ್ಧತೆಯನ್ನು ನಡೆಸಿದೆ.

Leave a Reply