ಮೊಬೈಲ್ ಫೋನ್ ತರಂಗಗಳು ಮನುಷ್ಯ ಶರೀರದಲ್ಲಿ ಉಂಟು ಮಾಡುವ ಆಘಾತಗಳು ಹಾಗೂ ಆರೋಗ್ಯ ಸಮಸ್ಯೆ ಗಳ ಕುರಿತು ಜಾಗತಿಕ ಮಟ್ಟದಲ್ಲೇ ಚರ್ಚೆ ನಡೆಯುತ್ತಿದೆ. ಹೆಚ್ಚಿನ ವೈದ್ಯಕೀಯ ಸಂಶೋಧನೆಗಳು ಇದರ ದುಷ್ಪರಿಣಾಮ ಗಳತ್ತ ಬೊಟ್ಟು ಮಾಡುತ್ತಿದೆ. ಆದರೆ ಹೆಚ್ಚಿನವರು ಮೊಬೈಲ್‍ನ ವಿಪತ್ತುಗಳ ಅಧ್ಯಯನಗಳು ಅತಿಶಯೋಕ್ತಿಯಿಂದ ಕೂಡಿದೆಯೆಂದು ತಳ್ಳಿ ಹಾಕುತ್ತಾರೆ.

ಬ್ರಿಟನ್‍ನ ರಾಷ್ಟ್ರೀಯ ವಿಜ್ಞಾನ ಸಂಸ್ಥೆಯು ನಡೆಸಿದ ಹೊಸ ಸಂಶೋಧನೆಯಂತೆ ವಿವಿಧ ಕಂಪೆನಿಗಳ ಹ್ಯಾಂಡ್‍ಸೆಟ್‍ಗಳು ವಿವಿಧ ರೀತಿಯ ಪರಿಣಾಮವನ್ನು ಮನುಷ್ಯ ಶರೀರದಲ್ಲಿ ಉಂಟು ಮಾಡುತ್ತ ದೆಂದು ಹೇಳಿದೆ. ಮೊಬೈಲ್‍ಗಳ ಆಂಟೆನಾ ಗಳ ರೂಪವೂ ನಿರ್ಣಾಯಕವಾಗಿದೆ. ಎತ್ತರದ ಆ್ಯಂಟೆನವಿರುವವುಗಳಿಂದ ದುಷ್ಪರಿ ಣಾಮಗಳು ಕಡಿಮೆಯೆಂದು ಅದರ ಅಭಿಪ್ರಾಯ.

ಸೆಲ್ ಫೋನ್ ಗಳನ್ನು ಮಿನಿ ಪ್ರಸಾರ ಸ್ಟೇಶನ್‍ಗಳೆಂದು ವಿಶ್ಲೇಷಿಸಬಹುದು. ಅದು ವಿದ್ಯುತ್ ಕಾಂತೀಯ ತರಂಗ ಗಳನ್ನು ಕಳಿಸುವ ಹಾಗೂ ಸ್ವೀಕರಿಸುವ ಕೆಲಸ ಮಾಡುತ್ತದೆ. ಮೈಕ್ರೋವೇವ್‍ನ ಸಾಲಿಗೆ ಸೇರಿರುವ ಇದರ ತರಂಗಗಳು ಮಾನವ ಶರೀರದ ಕೋರ್ಟಿಝೋನ್ ಹಾರ್ಮೋನ್‍ನ ಉತ್ಪಾದನೆಯನ್ನು ಹೆಚ್ಚಿಸು ತ್ತದೆಂದು ವಾಷಿಂಗ್ಟನ್‍ನಲ್ಲಿ ನಡೆಸಿದ ಸಂಶೋಧನೆ ದೃಢಪಡಿಸಿದೆ.

ಮನುಷ್ಯನ ಮಸ್ತಿಷ್ಕದಲ್ಲಿ ನಡೆಯುವ ವಿದ್ಯುತ್ ರಾಸಾಯನಿಕ ಕ್ರಿಯೆಗಳಲ್ಲಿ ವ್ಯತ್ಯಾಸ ಉಂಟು ಮಾಡಲು ಮೊಬೈಲ್ ತರಂಗಗಳಿಗೆ ಸಾಧ್ಯವಾಗುತ್ತದೆಂಬುದು ಸಂಶಯಾತೀತವಾಗಿ ದೃಢಪಟ್ಟಿದೆ. ಕೆಲವು ಕಂಪೆನಿಗಳು ಅತೀವ ಶ್ರದ್ಧೆ, ಏಕಾಗ್ರತೆ ಮಾನಸಿಕ ತನ್ಮಯತೆ ಅಗತ್ಯವಿರುವ ಕೆಲಸ ನಿರ್ವಹಿಸುವ ಅವರ ನೌಕರರಿಗೆ ಕೆಲಸದ ಸಮಯದಲ್ಲಿ ಮೊಬೈಲ್ ಉಪಯೋಗಿಸು ವುದನ್ನು ನಿಷೇಧಿಸಿದೆ. ದೀರ್ಘ ಸಮಯ ಮೊಬೈಲ್ ತರಂಗಗಳನ್ನು ಸ್ವೀಕರಿಸ ಬೇಕಾದ ಶರೀರ ಭಾಗಗಳ ನಾಡಿಯ ಸ್ಪಂದನವು ಮಂದಗತಿಯಾಗಿ ನೌಕರರ ಏಕಾಗ್ರತೆ ಹಾಗೂ ಕಾರ್ಯದಕ್ಷತೆಯನ್ನು ಕುಂಠಿತಗೊಳಿಸುತ್ತದೆ.

ಮೊಬೈಲ್ ತರಂಗಗಳನ್ನು ಕ್ಷುಲ್ಲಕವಾಗಿ ಭಾವಿಸಬಾರದೆಂದು ಅದರ ವಿಕಿರಣಗಳು ನಮ್ಮ ಶರೀರದಲ್ಲುಂಟು ಮಾಡುವ ಪರಿ ಣಾಮದ ಕುರಿತು ಅಧ್ಯಯನ ನಡೆಸು ತ್ತಿರುವ ಫಿನ್‍ಲ್ಯಾಂಡ್‍ನ ತಜ್ಞ ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಮನುಷ್ಯ ಶರೀರದ ಕೋಶಗಳ ಪೆÇ್ರೀಟೀನ್ ವ್ಯವಸ್ಥೆಯ ತಾಳ ತಪ್ಪಿಸಲು ಮಾತ್ರವಲ್ಲ ಕೋಶದ ಘಟಕ ಗಳಿಗೆ ಕಿರಿಕಿರಿಯುಂಟಾಗಿ ಗೆಡ್ಡೆಗಳು ಬೆಳೆಯುವ ಸಾಧ್ಯತೆಯಿದೆ. ಶರೀರದ ಇತರ ಭಾಗಗಳಿಗಿಂತ ಹೆಚ್ಚಾಗಿ ಮೆದುಳಿಗೆ ಹೆಚ್ಚಿನ ದುಷ್ಪರಿಣಾಮವುಂಟಾಗುತ್ತದೆ. ಮೊಬೈಲ್ ಫೆÇೀನ್ ಉಪಯೋಗದಿಂದ ನನಗೆ ಮೆದುಳಿನಲ್ಲಿ ಗೆಡ್ಡೆ ಉಂಟಾಗಿದೆ ಯೆಂದು ಓರ್ವ ವ್ಯಕ್ತಿ ಸೆಲ್‍ಫೆÇೀನ್ ಕಂಪೆನಿಯ ವಿರುದ್ಧ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ ಘಟನೆಯೂ ಅಮೇರಿಕ ದಲ್ಲಿ ನಡೆದಿದೆ.

ಇಯರ್ ಫೋನ್ ಇನ್ನೂ ಅಪಾಯ:

ಮೊಬೈಲ್ ಫೋನ್ ನಿಂದ ಹೊರ ಬರುವ ವಿಕಿರಣಗಳ ಶಕ್ತಿಯನ್ನು ಕಡಿಮೆ ಗೊಳಿಸಲು ಕೆಲವರು ಮಾತನಾಡುವ ಸಮಯದಲ್ಲಿ ಹೆಡ್‍ಸೆಟ್ ಅಥವಾ ಇಯರ್ ಫೋನ್ಉಪಯೋಗಿಸುತ್ತಾರೆ. ಆದರೆ ಶರೀರಕ್ಕುಂಟಾಗುವ ರೇಡಿಯೇಶನ್‍ನ ಅಳತೆ ಯನ್ನೂ ಅದು ಕಡಿಮೆ ಮಾಡುವುದಿಲ್ಲ. ಹೆಚ್ಚುಗೊಳಿಸುತ್ತದೆ. ಕಿವಿಗಳಲ್ಲಿ ಇಯರ್ ಫೋನ್ ಸಿಕ್ಕಿಸಿ ಮಾತನಾಡುವವರಿಗೆ ಇತರ ರಿಗಿಂತ ಮೂರುಪಟ್ಟು ಹೆಚ್ಚು ಅಪಾಯವಿದೆ. ಮೊಬೈಲ್ ಉಪಯೋಗಿಸುವವರಿಗೆ ಇದು ಸುರಕ್ಷಿತ ಪರಿಹಾರವಲ್ಲ. ಪ್ರಯಾಣದಲ್ಲಿ ಕೈಯಲ್ಲಿ ಹಿಡಿದು ಮಾತನಾಡಲು ಕಷ್ಟ ವಾಗುವುದಕ್ಕೆ ಸುಲಭ ಮಾರ್ಗವೇ ಹೊರತು ಇದು ಶರೀರದ ಮೇಲಾಗುವ ವಿಕಿರಣವನ್ನು ಕಡಿಮೆಗೊಳಿಸಲು ಯಾವ ರೀತಿಯಲ್ಲೂ ಪರ್ಯಾಪ್ತವಲ್ಲ.
ಮೊಬೈಲ್ ಫೆÇೀನ್ ಉಪಯೋಗಿಸು ವವರ ಆರೋಗ್ಯದ ಸಂರಕ್ಷಣೆಗೆ ನಾವು ಮಾಡಬಹುದಾದ ಮುಖ್ಯ ಕೆಲಸ ವೇನೆಂದರೆ ಮೊಬೈಲ್‍ನ ಉಪಯೋಗ ವನ್ನು ಕಡಿಮೆಗೊಳಿಸುವುದು. ಮಕ್ಕಳನ್ನು ಇದರ ಉಪಯೋಗದಿಂದ ತುಂಬಾ ದೂರದಲ್ಲಿರಿಸಬೇಕು.

1. ಮೊಬೈಲ್‍ನಲ್ಲಿ ಮಾತನಾಡುವ ಸಮಯದಲ್ಲಿ ಇಯರ್ ಫೋನ್ ಕಿವಿಯಿಂದ ತೆಗೆದಿಡಿ. ಹ್ಯಾಂಡ್‍ಸೆಟ್ಟ್‍ನ ಆಂಟೆನಾದ ಭಾಗವು ಶರೀರಕ್ಕೆ ತಾಗದಿರಲು ಪ್ರಯತ್ನಿಸಿ.
2. ಮೊಬೈಲ್ ಉಪಯೋಗಿಸುವ ಸಮಯವನ್ನು ಕಡಿಮೆಗೊಳಿಸಿ. ಮೆದುಳಿನ ಸಹಜ ಕ್ರಿಯೆಯಲ್ಲಿ ವ್ಯತ್ಯಾಸವುಂಟಾಗಲು ಕೇವಲ ಎರಡು ನಿಮಿಷದ ಕರೆ ಸಾಕಾಗುವುದು. ಅತ್ಯಗತ್ಯವಿರುವ ಮಾತುಗಳನ್ನು ಮಾತ್ರ ಮಾತನಾಡಬೇಕು ಎಂಬ ನಿಲುವು ಆರೋಗ್ಯಕರ. ದೀರ್ಘ ಮಾತುಕತೆಗೆ ಲ್ಯಾಂಡ್‍ ಫೋನ್ ಉಪಯೋಗಿಸುವುದು ಉತ್ತಮ. ಒಂದು ನಿಮಿಷಕ್ಕಿಂತ ಹೆಚ್ಚಾಗಿ ಉಪಯೋಗಿಸದೆ ದಿನಕ್ಕೆ ಮೂರು ಬಾರಿ ಮೊಬೈಲ್ ಉಪಯೋಗಿಸುವುದಾದರೆ ನಮ್ಮ ಆರೋಗ್ಯಕ್ಕೆ ಕೇಡುಂಟಾಗಲಾರದು. ಕರೆಯನ್ನು ಸ್ವೀಕರಿಸಲು ಸಾಧ್ಯವಾಗದಂತಹ ವಿೂಟಿಂಗ್, ಪ್ರಾರ್ಥನೆ, ನಿದ್ದೆ, ಅಧ್ಯಯನದ ಸಮಯದಲ್ಲಿ ಮೊಬೈಲನ್ನು ಸೈಲೆಂಟ್ ಮಾಡದೆ ಸ್ವಿಚ್ ಆಫ್ ಮಾಡಬೇಕು.
3. ಮಕ್ಕಳ ಕೈಗೆ ಮೊಬೈಲ್ ನೀಡಲೇ ಬಾರದು. ಅವರ ಮೆದುಳು ಬೆಳವಣಿಗೆಯ ಹಂತದಲ್ಲಿರುವುದರಿಂದ ಪ್ರಾಯ ಪೂರ್ತಿ ಯಾದವರಿಗಿಂತ ಅವರ ಮೇಲೆ ಬೀರುವ ದುಷ್ಪರಿಣಾಮಗಳು ಹೆಚ್ಚಿರುತ್ತದೆ.
4. ಗರ್ಭಿಣಿಯರು ಸುದೀರ್ಘ ಮಾತು ಕತೆಯಿಂದ ದೂರವುಳಿಯಬೇಕು. ತಮ್ಮ ಹೊಟ್ಟೆಯ ಭಾಗದಲ್ಲಿ ಮೊಬೈಲ್ ಇಡ ಬಾರದು. ಗರ್ಭಧಾರಣೆಯ ಆರಂಭದ 3 ತಿಂಗಳ ಭ್ರೂಣಕ್ಕೆ ಮೊಬೈಲ್‍ನ ವಿದ್ಯುತ್ ಕಾಂತೀಯ ತರಂಗಗಳು ತೀವ್ರ ಹಾನಿ ಕರವಾಗಿರುತ್ತದೆ.
5. ರಬ್ಬರ್ ಟ್ಯೂಬ್ ಇಯರ್ಫೋನ್ಗಳನ್ನು ಉಪಯೋಗಿಸಿ. ಸ್ಟೆತ ಸ್ಕೋಪ್ ರೀತಿಯ ಈ ರಬ್ಬರ್ ಟ್ಯೂಬ್ ಗಳು ಶಬ್ದವನ್ನು ಪರಂಪರಾಗತ ರೀತಿ ಯಲ್ಲೇ ಕಳಿಸಿಕೊಡುತ್ತದೆ. ಆದರೆ ಸಾಮಾನ್ಯ ಇಯರ್ ಫೋನ್ ಗಳು ಕಾಂತೀಯ ತರಂಗಗಳನ್ನೂ ಹೀರಿಕೊಳ್ಳುತ್ತದೆ.
6. ಹ್ಯಾಂಡ್ ಸೆಟ್ಟನ್ನು ಒಮ್ಮೆಯೂ ಎದೆಯ ಬಳಿ ಇಟ್ಟುಕೊಳ್ಳಬಾರದು. ಮೊಬೈಲ್ ತರಂಗಗಳು ಅತ್ಯಧಿಕ ಪ್ರತಿಫಲನ ಗೊಳ್ಳುವ ಅವಯವ ಹೃದಯವಾಗಿದೆ. ಬ್ಯಾಗ್‍ನಲ್ಲಿರಿಸಿ ಹೃದಯದಿಂದ 50 ಸೆಂಟಿ ವಿೂಟರ್ ದೂರವಿರಿಸಲು ಪ್ರಯತ್ನಿಸಿ.
7. ಮೊಬೈಲನ್ನು ಸೊಂಟದಲ್ಲೇ, ಪ್ಯಾಂಟ್‍ನ ಕಿಸೆಯಲ್ಲೇ ಇಟ್ಟುಕೊಳ್ಳುವುದು ಒಳ್ಳೆಯದಲ್ಲ. ಸ್ಥಿರವಾಗಿ ಈ ಭಾಗದಲ್ಲೇ ಮೊಬೈಲ್ ಇಡುವವರ ಬೀಜಾಣುಗಳ ಸಂಖ್ಯೆಯು 30 ಶೇಕಡಾ ಕಡಿಮೆಯಾಗು ವುದು ಕಂಡು ಬಂದಿದೆ.
8. ಫೋನ್ ಕರೆ ಮಾಡುವಾಗ ಸ್ವೀಕರಿಸುವ ಚಂದಾದಾರನು ಅದನ್ನು ಸ್ವೀಕರಿಸಿದ ಬಳಿಕವೇ ಮೊಬೈಲನ್ನು ಕಿವಿಗೆ ಇಟ್ಟುಕೊಳ್ಳಬೇಕು.
9. ಲಿಫ್ಟ್, ವಿಮಾನ ಮೊದಲಾದ ಲೋಹಗಳಿಂದ ಮುಚ್ಚಿದ ಸ್ಥಳಗಳಲ್ಲಿ ಮೊಬೈಲ್ ಉಪಯೋಗಿಸಬಾರದು. ಏಕೆಂದರೆ ಇಂತಹ ಲೋಹದ ಗೋಡೆಗಳು ವಿಕಿರಣವನ್ನು ತಡೆದು ಮೂಲಕ್ಕೆ ಕಳಿಸಿ ಕೊಡುತ್ತದೆ.
10. ನೆಟ್‍ವರ್ಕ್ ಕಡಿಮೆ ಇರುವ ಪ್ರದೇಶಗಳಲ್ಲಿ ಫೋನ್ ಮಾಡದಿರಿ. ಕಾರಣ ಇಂತಹ ಸ್ಥಳಗಳಲ್ಲಿ ಮೊಬೈಲ್ ಹೆಚ್ಚು ತರಂಗಗಳನ್ನು ಪ್ರಸಾರ ಮಾಡಿ ಕಾರ್ಯ ನಿರ್ವಹಿಸುತ್ತದೆ.
11. ಉಪಯೋಗವಿಲ್ಲದ ಮೊಬೈಲ್ ಫೋನ್ ಬ್ಯಾಟರಿಗಳನ್ನು ಜನವಾಸವಿರುವ ಸ್ಥಳಗಳಲ್ಲಿ ಎಸೆಯಬೇಡಿ. ಅದು ಪರಿ ಸರಕ್ಕೂ ನಮಗೂ ಹಾನಿಕರವಾಗಿದೆ.
12. ಹೃದ್ರೋಗ, ಹೆಚ್ಚಿನ ರಕ್ತದೊತ್ತಡ, ಅಪಸ್ಮಾರ, ಮಾನಸಿಕ ರೋಗಗಳಿಗೆ ಚಿಕಿತ್ಸೆ ಪಡೆಯುವವರು ಮೊಬೈಲ್ ಫೆÇೀನ್‍ನ ಉಪಯೋಗವನ್ನು ವರ್ಜಿಸುವುದೇ ಒಳಿತು. ಏಕೆಂದರೆ ಅದರ ವಿದ್ಯುತ್ಕಾಂತೀಯ ತರಂಗಗಳು ಚಿಕಿತ್ಸೆಯಲ್ಲಿ ದುಷ್ಪರಿಣಾಮ ಉಂಟು ಮಾಡುವ ಸಾಧ್ಯತೆಯಿದೆ.

ಲೇಖಕರು : ಟಿ.ಕೆ. ಯೂಸುಫ್

Leave a Reply