ಹಿಮಾಚಲ ಪ್ರದೇಶದ ಕುಲ್ಲು ಹೈಸ್ಕೂಲಿನಲ್ಲಿ ನರೇಂದ್ರ ಮೋದಿಯವರ ” ಪರೀಕ್ಷಾ ಪರ್ ಚರ್ಚಾ” ಭಾಷಣವನ್ನು ಫೆಬ್ರವರಿ 17 ರ ಶುಕ್ರವಾರದಂದು ಟೆಲಿ ಕಾಸ್ಟ್ ಮಾಡಲಾಗಿತ್ತು.

ಈ ಸಂದರ್ಭದಲ್ಲಿ ದಲಿತ ಮಕ್ಕಳನ್ನು ಇತರ ವಿದ್ಯಾರ್ಥಿಗಳಿಂದ ಬೇರ್ಪಡಿಸಿ ಬೇರೆಯೇ ಸ್ಥಳದಲ್ಲಿ ಕುಳಿತುಕೊಳ್ಳುವಂತೆ ಮಾಡಿರುವ ಕುರಿತು ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

Image result for modi pariksha pe charcha dalitt students

ನಡೆದ ಘಟನಾವಳಿಯ ಕುರಿತು ಕುಲ್ಲು ಡೆಪ್ಯೂಟಿ ಕಮಿಷನರ್ ರವರಿಗೆ ದಲಿತ ವಿದ್ಯಾರ್ಥಿಗಳು ಪತ್ರವನ್ನು ಬರೆದಿದ್ದು “ತಮ್ಮನ್ನು ಭಾಷಣದ ವೇಳೆ ಬೇರೆಯೇ ಕೊಠಡಿಯಲ್ಲಿ ಕೂರಿಸಲಾಯ್ತು.

ಇತರೆಡೆಗೆ ತೆರಳಲು ಪ್ರಯತ್ನಿಸಿದಲ್ಲಿ ಅಸೈನ್ಮೆಂಟ್ ಅಂಕಗಳನ್ನು ಕಡಿತ ಗೊಳಿಸಲಾಗುವುದು ಎಂದು ನಮಗೆ ಎಚ್ಚರಿಕೆ ನೀಡಲಾಗಿತ್ತು. ಮಧ್ಯಾಹ್ನದ ಬಿಸಿ ಊಟದ ಸಂದರ್ಭದಲ್ಲಿಯೂ ನಮ್ಮನ್ನು ಅಪಮಾನಿಸುವ ಮತ್ತು ಹಿಯಾಳಿಸುವ ತಾರತಮ್ಯಗಳು ನಡೆಯುತ್ತವೆ.

Image result for modi pariksha pe charcha dalitt students

ಈ ಕುರಿತು ಶಾಲೆಯ ಮುಖ್ಯೋಪಾಧ್ಯಾಯರಾದ ರಂಜನ್ ಭಾರದ್ವಾಜ್ ರವರು ಯಾವುದೇ ಕ್ರಮವನ್ಮು ಕೈ ಗೊಳ್ಳುವುದಿಲ್ಲ; ಯಾಕೆಂದರೆ ಅವರೂ ಕೂಡ ಅಸ್ಪೃಶ್ಯತಾ ನೀತಿಯನ್ನೇ ಪಾಲಿಸುತ್ತಾರೆ”ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ‌.

Leave a Reply