ಮಹಿಳೆಯರನ್ನು ಗೌರವಿಸುವುದು ನಮ್ಮ ಸಂಸ್ಕೃತಿ ಎಂದು ಪ್ರಧಾನಿ ನರೇಂದ್ರ ಮೋದಿ ಮನದ ಮಾತು ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ನಾವಿಂದು ಬೇಟಿ ಬಚಾವೋ, ಭೇಟಿ ಪಡಾವೋ ಕುರಿತು ಮಾತಾಡುತ್ತೇವೆ. ಇದನ್ನು ಬಹಳ ಹಿಂದೆಯೇ ಶಾಸ್ತ್ರಗಳಲ್ಲಿ, ಸ್ಕಂದ ಪುರಾಣದಲ್ಲಿ ಹೇಳಲಾಗಿದೆ.
ಒಬ್ಬ ಮಗಳು ಹತ್ತು ಮಗನಿಗೆ ಸಮನಾಗಿದ್ದರೆ. ಹತ್ತು ಗಂಡು ಮಕ್ಕಳಿಂದ ಎಷ್ಟು ಪುಣ್ಯ ಸಿಗುತ್ತದೆ ಅದು ಒಂದು ಹೆಣ್ಣು ಮಗಳಿಂದ ಸಿಗುತ್ತದೆ. ಇದು ಮಹಿಳೆಯರ ಮಹತ್ವವನ್ನು ಸಾರುತ್ತದೆ. ಆದ್ದರಿಂದಲೇ ನಮ್ಮಲ್ಲಿ ಮಹಿಳೆಗೆ ಶಕ್ತಿಯ ದರ್ಜೆ ನೀಡಲಾಗಿದೆ ಎಂದಿದ್ದಾರೆ.

ಈ ವರ್ಷದ ಮೊದಲ ಮನದ ಮಾತು ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ಭಾರತದ ಮೊದಲ ಗಗನಯಾತ್ರಿ ಕಲ್ಪನಾ ಚಾವ್ಲಾ ಅವರನ್ನು ಸ್ಮರಿಸಿದ್ದಾರೆ. ಕಲ್ಪನಾ ಚಾವ್ಲಾ ಅವರು ಎಲ್ಲ ಭಾರತೀಯರಿಗೆ ವಿಶೇಷವಾಗಿ ಯುವ ಜನಾಂಗಕ್ಕೆ ಸ್ಪೂರ್ತಿ ನೀಡಿ ನೀಡಿ ಹೋಗಿದ್ದಾರೆ ಎಂದಿದ್ದಾರೆ.

Leave a Reply