ಪಟ್ನಾ: ದೇಶಕ್ಕಾಗಿ ಸೈನ್ಯವನ್ನು ಕಟ್ಟಲು ಆರೆಸ್ಸೆಸ್‍ಗೆ ಮೂರು ದಿವಸ ಸಾಕೆಂದು ಆರೆಸ್ಸೆಸ್ ಸರ ಸಂಘ ಚಾಲಕ ಮೋಹನ್ ಭಾಗವತ್ ಹೇಳಿದ್ದಾರೆ.

Image result for mohan bhagwat

ಅಂತಹದೊಂದು ಪರಿಸ್ಥಿತಿಯಲ್ಲಿ ಕೂಡಲೇ ಸೈನ್ಯವನ್ನು ರೂಪೀಕರಿಸಲಾಗುವುದು ಎಂದು ಭಾಗವತ್ ಹೇಳಿದರು.

ಮುಝಪ್ಫರ್‍ಪೂರ್‍ನಲ್ಲಿ ಒಂದು ಶಾಲೆಯಲ್ಲಿ ಆರೆಸ್ಸೆಸ್ ಕಾರ್ಯಕರ್ತರೊಂದಿಗೆ ಮಾತಾಡುತ್ತಾ ಸೈನ್ಯವನ್ನು ರೂಪೀಕರಿಸುವ ಸಂಘಟನೆಯ ಸಾಮರ್ಥ್ಯವನ್ನು ಅವರು ಪ್ರಶಂಸಿಸಿದರು.

Image result for rss training

ಆರೆಸ್ಸೆಸ್ ಮೂರು ದಿವಸದಲ್ಲಿ ಸೈನ್ಯವನ್ನು ಕಟ್ಟಬಹುದು. ಸೈನ್ಯಕ್ಕೆ ಇದು ಮಾಡಬೇಕಾದರೆ ಆರು ತಿಂಗಳ ಸಮಯ ಬೇಕಾದೀತು.

ದೇಶ ಸಂದಿಗ್ಧ ಸ್ಥಿತಿಯನ್ನು ಎದುರಿಸುವುದಾದರೆ ಆರೆಸ್ಸೆಸ್ ಹೋರಾಡಲು ಅಲ್ಲಿರುತ್ತದೆ. ಸಂವಿಧಾನ ಅವಕಾಶ ನೀಡುವುದಾದರೆ ಹಾಗೆ ಮಾಡುತ್ತದೆ ಎಂದರು.

Image result for indian army training
ಭಾರತೀಯ ಸೇನಾ ತರಬೇತಿ

ಆರೆಸ್ಸೆಸ್ ಮಿಲಿಟರಿ, ಪ್ಯಾರಾಮಿಲಿಟರಿ ಅಲ್ಲ. ಕಠಿಣ ಶಿಸ್ತು ಪಾಲಿಸುವ ಸಂಘಟನೆ ಆರೆಸ್ಸೆಸ್ ಆಗಿದ್ದು, ದೇಶಕ್ಕಾಗಿ ಎಂತಹ ತ್ಯಾಗಕ್ಕೂ ನಾವು ಸಿದ್ಧ ಎಂದು ಮೋಹನ್ ಭಾಗವತ್ ಹೇಳಿದರು.

ವೈಯಕ್ತಿಕ ಜೀವನದಲ್ಲಿಸಾಮಾಜಿಕ ಜೀವನದಲ್ಲಿ ಮಾದರಿ ಆರೆಸ್ಸೆಸ್ ಆಗಿದೆ ಎಂದು ಅವರು ಹೇಳಿದರು.

ಇದೀಗ ಆರೆಸ್ಸೆಸ್ ಮುಖ್ಯಸ್ಥರು ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಿದ್ದು ವಿಡಿಯೋ ವೈರಲ್ ಆಗಿದೆ.

ವೀಡಿಯೊ ನೋಡಲು ಲಿಂಕ್ ಕ್ಲಿಕ್ ಮಾಡಿ

http://newsable.asianetnews.com/video/rss-apologise

 

Leave a Reply