ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (ಯುಪಿಎಸ್ಸಿ) 2017 – ಪ್ರತಿಷ್ಠಿತ ಸಿವಿಲ್ ಸರ್ವೀಸಸ್ ಪರೀಕ್ಷೆಯ ಫಲಿತಾಂಶ ಏಪ್ರಿಲ್ 27 ರಂದು ಪ್ರಕಟವಾಯಿತು.

ಭಾರತೀಯ ಕಂದಾಯ ಸೇವಾ ಅಧಿಕಾರಿ ದುರಿಶೆಟ್ಟಿ ಅನುದಿಪ್ ಪ್ರಥಮ ರ‌್ಯಾಂಕ್ ಪಡೆದರೆ, ಎರಡನೇ ಶ್ರೇಯಾಂಕವನ್ನು ಅನು ಕುಮಾರಿ ಗಳಿಸಿದರು. ಪರೀಕ್ಷೆ ಬರೆದ 240 ಮಹಿಳೆಯರಲ್ಲಿ ಕುಮಾರಿ ಅವರು ಅಗ್ರಸ್ಥಾನ ಪಡೆದ ಸಾಧನೆ ಮಾಡಿದ್ದಾರೆ.

ಹರಿಯಾಣದ ಮೂಲದ ಅನು ಕುಮಾರಿ (31) ಎಂಬವರು ಯುಪಿಎಸ್ಸಿ ಪರೀಕ್ಷೆಯಲ್ಲಿ 2ನೇ ರ‌್ಯಾಂಕ್ ಪಡೆದಿದ್ದು ಮಾತ್ರವಲ್ಲ, ಅವರು ನಾಲ್ಕು ವರ್ಷದ ಮಗುವಿನ ತಾಯಿ ಎಂಬುದೇ ವಿಶೇಷ.

ತಾಯಿಯಾಗಿ ಮನೆಯ ಜವಾಬ್ದಾರಿಗಳನ್ನು ನಿರ್ವಹಿಸುವುದರೊಂದಿಗೆ ಪ್ರತಿದಿನ ಸತತವಾಗಿ 11 ರಿಂದ 12 ಗಂಟೆಗಳ ಕಾಲ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದೆ. ಅಲ್ಲದೇ ತಾನು ವಾಸಿಸುವ ಹಳ್ಳಿಯಲ್ಲಿ ದಿನಪತ್ರಿಕೆ ಲಭಿಸುವುದಿಲ್ಲ. ಮಾಹಿತಿಗಾಗಿ ಆನ್ ಲೈನ್ ಸಹಾಯ ಪಡೆಯುತ್ತಿದ್ದೆ. ಈಗ ದೇಶಸೇವೆ ಮಾಡುವುದು ನನ್ನ ಪ್ರಮುಖ ಗುರಿ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಅನು ಕುಮಾರಿ ಅವರು ದೆಹಲಿ ವಿವಿ ಹಿಂದೂ ಕಾಲೇಜಿನಲ್ಲಿ ಭೌತ ಶಾಸ್ತ್ರದಲ್ಲಿ ಪದವಿ ಪೂರ್ಣಗೊಳಿಸಿದ್ದು, ನಾಗಪುರ ಐಎಂಟಿ ಯಿಂದ ಎಂಬಿಎ ಪದವಿಯನ್ನು ಪಡೆದಿದ್ದಾರೆ. ದೇಶದ ಸೇವೆ ಮಾಡುವುದರ ಜೊತೆಗೆ ಮಹಿಳೆಯರ ರಕ್ಷಣೆಗೆ ಆದ್ಯತೆ ನೀಡುತ್ತೇನೆ ಎಂದು ತಿಳಿಸಿದ್ದಾರೆ.

Leave a Reply