ಕಳೆದ ಕೆಲವು ದಿನಗಳಿಂದ ಭಾರತದಲ್ಲಿ ಅತ್ಯಾಚಾರ, ಗ್ಯಾಂಗ್ ರೇಪ್ ನದ್ದೇ ಸುದ್ದಿ ತಾರಕಕ್ಕೇರಿದೆ.

8 ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ. ಸೂರತ್ ನಲ್ಲಿ 11 ವರ್ಷ ಬಾಲಕಿಯ ಅತ್ಯಾಚಾರ ಮತ್ತು ಕೊಲೆ, ಕಥುವಾ ಮತ್ತು ಉನ್ನಾವೋ ಪ್ರಕರಣಗಳು ಇಡೀ ದೇಶದ ಜನತೆಯನ್ನು ಕೆಂಡಾಮಂಡಲಗೊಳಿಸಿದೆ.

ಇದೀಗ ಎಂಟು ವರ್ಷದ ತನ್ನ ಮಗಳಿಗೆ ಮೌಲ್ವಿಯೊಬ್ಬರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಸ್ವತಃ ಮಗಳ ತಾಯಿಯೇ ಮಸೀದಿಯೊಳಗೆ ಹೋಗಿ ಮೌಲ್ವಿಯನ್ನು ಥಳಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಮೌಲ್ವಿಯನ್ನು ಥಳಿಸುತ್ತಿರುವ ವಿಡಿಯೋ ಟ್ವಿಟರ್ ನಲ್ಲಿ ಅಪ್ಲೋಡ್ ಮಾಡಲಾಗಿದ್ದು ಇಂಡಿಯಾ ಟೈಮ್ಸ್ ಈ ಘಟನೆಯನ್ನು ವರದಿ ಮಾಡಿದೆ.

https://twitter.com/She_Contradicts/status/985511587388813312

Leave a Reply