ಮುಂಬೈಯ ಸಬರ್ಬನ್ ರೈಲಿನಲ್ಲಿ ಅಪಾಯಕಾರಿ ರೀತಿಯಲ್ಲಿ ವರ್ತಿಸಿದ ಹುಡುಗರ ವೀಡಿಯೋಗಳು ಈ ಹಿಂದೆಯೂ ಬಂದಿದೆ.

ಈ ಬಾರಿ ಅದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಫ್ಲಾಟ್ ಪಾರ್ಮ್‍ನಲ್ಲಿ ನಿಂತಿದ್ದ ಓರ್ವರ ಸ್ಮಾರ್ಟ್ ಫೋನ್ ಎಗರಿಸುವ ದೃಶ್ಯ ಸೆರೆಯಾಗಿದೆ.

ಈ ತಂಡದಲ್ಲಿರುವ ಓರ್ವ ವ್ಯಕ್ತಿ ತೆಗೆದ ಸೆಲ್ಫಿ ವೀಡಿಯೋದಲ್ಲಿ ಇದು ಬಹಿರಂಗವಾಗಿದೆ. ಈ ಹುಡುಗರಲ್ಲಿ ಓರ್ವ ಟ್ರೈನಲ್ಲಿ ನೇತಾಡುತ್ತಾ ಈ ದೃಶ್ಯ ಚಿತ್ರೀಕರಿಸಿರುತ್ತಾನೆ. ನಾಲ್ವರು ಈ ಅಪಾಯಕಾರಿ ವೀಡಿಯೋದಲ್ಲಿ ಭಾಗಿಯಾಗಿದ್ದಾರೆ.

ಪ್ರಯಾಣಿಕನಿಂದ ಮೊಬೈಲ್ ಲಪಟಾಯಿಸಿದ್ದು ಮಾತ್ರವಲ್ಲ ಓಡುತ್ತಿದ್ದ ರೈಲಲ್ಲಿ ಹೊರಗಡೆ ನೇತಾಡುತ್ತಾ ಮೇಲೇರಿದ್ದಾರೆ. ಕಳ್ಳತನ ಮತ್ತು ಅಪಾಯಕಾರಿ ಪೃವೃತ್ತಿಯ ಈ ಹುಡುಗರ ಪತ್ತೆಗಾಗಿ ಪೋಲೀಸರು ಬಲೆ ಬೀಸಿದ್ದಾರೆ.

Leave a Reply