ಲಂಡನ್ : ಇಂಗ್ಲೆಂಡ್‍ನಲ್ಲಿ 20 ವರ್ಷದ ಓರ್ವ ಮುಸ್ಲಿಂ ಮಹಿಳೆ ಮಿಸ್‍ ಇಂಗ್ಲೆಂಡ್ ಫಿನಾಲೆಯಲ್ಲಿ ಹಿಜಾಬ್ ಧರಿಸಿ ರ್ಯಾಂಪ್‍ನಲ್ಲಿ ನಡೆಯಲು ತಯಾರಿ ನಡೆಸಿದ್ದಾರೆ. ಸಾರಾ ಇಫ್ತಿಕಾರ್ ಎಂಬ ಮಹಿಳೆ ಪ್ರಶಸ್ತಿ ಗಳಿಸುವ ಕನಸ್ಸನನ್ನು ಹೊಂದಿದ್ದಾರೆ.

ಕಾರ್ಯಕ್ರಮದ ಕ್ವಾಲಿಫೈಯಿಂಗ್ ರೌಂಡನಲ್ಲಿ ಬಹಳಷ್ಟು ಮಹಿಳೆಯರು ಹಿಜಾಬ್ ಧರಿಸಿದ್ದರು. ಆದರೆ ಸಾರಾ ಫಿನಾಲೆಯಲ್ಲಿ ಕೂಡ ಹಿಜಾಬ್ ಧರಿಸುತ್ತಿರುವ ಮೊದಲ ಮಹಿಳೆ ಎನಿಸಿಕೊಳ್ಳಲಿದ್ದಾರೆ. ಸಾರಾ ವಕೀಲಿ ವೃತ್ತಿ ಕಲಿಯುತ್ತಿದ್ದು ಹಡಸ್‍ಫೀಲ್ಡ್‍ನಲ್ಲಿ ಮತ್ತು ಯಾರ್ಕ್‍ಶೈರ್‍ನಲ್ಲಿ ಮಿಸ್ ಪಾಪುಲೇರಿಟಿ ರೌಂಡ್‍ನಲ್ಲಿ ವಿಜೇತರಾಗಿದ್ದರು. ತೂಕ, ಜಾತಿ,ಬಣ್ಣ ಮತ್ತು ಆಕಾರದ ಹೊರತಾಗಿಯೂ ಎಲ್ಲರೂ ಅವರವರಭಾವಕ್ಕೆ ಸುಂದರರೇ ಆಗಿದ್ದಾರೆ ಎಂದು ಸಾರಾ ಹೇಳಿದರು.

ಇದಕ್ಕಿಂತ ಮೊದಲು ಕೂಡ ಮಿಸ್ ಇಂಗ್ಲೆಂಡ್ ಪ್ರಶಸ್ತಿ ಮುಸ್ಲಿಂ ಯುವತಿಯರಿಗೆ ಸಿಕ್ಕಿದೆ. ಆದರೆ ಅವರು ಫಿನಾಲೆಯಲ್ಲಿ ಹಿಜಾಬ್ ಧರಿಸಿರಲಿಲ್ಲ. ಮುಸ್ಲಿಮ್ ಸಮುದಾಯದ ಮುಂದಿರುವ ನಕರಾತ್ಮಕಸವಾಲಿಗೆ ಸವಾಲು ಒಡ್ಡುವುದು ಕೂಡ ಒಂದು ಸವಾಲೇ ಆಗಿದೆ. ತಾನು ತನ್ನಂತಿರುವ ಮಹಿಳೆಯರನ್ನು ಪ್ರತಿನಿಧಿಸಲು ಬಯಸುತ್ತಿದ್ದೇನೆ ಎಂದು ಆವರು ಹೇಳಿದರು.

Leave a Reply