ವಿಯನ್ನ : ಆಸ್ಟ್ರೀಯದ ಬಲಪಂಥೀಯ ಪ್ರೀಡಂ ಪಾರ್ಟಿ(ಎಫ್‍ಪಿಒ) ಮುಸ್ಲಿಂ ಯೂತ್ ಆಸ್ಟ್ರೀಯ(ಎಂಜಿಒ) ವಿರುದ್ದ ಎತ್ತಿದ ಆರೋಪಗಳನ್ನು ಹಿಂಪಡೆದಿದೆ.

Image result for FPO in austria

ಎಂಜಿಒ ಇಸ್ಲಾಮಿಸ್ಟ್ ಸಂಘಟನೆಯೆನ್ನುವ ವಾದವನ್ನು ಫ್ರೀಡಂ ಪಾರ್ಟಿ ಹಿಂಪಡೆದಿದೆ. ಇದಕ್ಕೆ ಸಂಬಂಧಿಸಿ ಅವರ ವಾದವನ್ನು ಕೋರ್ಟಿನಲ್ಲಿ ಸಾಬೀತು ಪಡಿಸಲು ಆಗದಿರುವುದರಿಂದ ಹೇಳಿಕೆಯನ್ನು ಹಿಂಪಡೆದು ನಷ್ಟ ಪರಿಹಾರ ಕೊಡಲು ಅದು ಸಿದ್ಧವಾಗಿದೆ.

ಮುಸ್ಲಿಂ ಯೂತ್ ಆಸ್ಟ್ರೀಯ ಇಸ್ಲಾಮಿಕ್ ಆಶಯದಂತೆ ಕೆಲಸ ಮಾಡುತ್ತಿರುವುದಕ್ಕೆ ಹಲವು ಪುರಾವೆಗಳಿವೆ ಎಂದು ಎಫ್‍ಪಿಒ ಚೇರ್‍ಮೆನ್ ಹೈನ್ಸ್ ಕ್ರಿಸ್ಟ್ಯನ್ ಕಳೆದ ಜೂನ್‍ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದರು.

ಸಂಘಟನೆಗೆ ಇಸ್ಲಾಮೀಕ್ ರಾಜಕೀಯ ಪಾರ್ಟಿಗಳೊಂದಿಗೆ ಸಂಬಂಧವಿರುವುದು ತಮಗೆ ಗೊತ್ತಾಗಿದೆ ಎಂದು ಕ್ರಿಸ್ಟ್ಯನ್ ಹೇಳಿದ್ದರು.

ಈ ಆರೋಪಗಳ್ನು ಎಫ್‍ಪಿಒದ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗಿತ್ತು. ಆದರೆ ಮುಸ್ಲಿಂ ಯೂತ್ ಆಸ್ಟ್ರೀಯ ಈ ಆರೋಪಗಳನ್ನು ನಿರಾಕರಿಸಿತ್ತು. ಫ್ರೀಡಂ ಪಾರ್ಟಿ ಮತ್ತು ಹೈನ್ಸ್ ಕ್ರಿಸ್ಟ್ಯನ್ ವಿರುದ್ಧ ಕೇಸು ಹಾಕಿತ್ತು.

Image result for muslim youth austria fpo

ವಿಯೆನ್ನದ ಕಮರ್ಶಿಯಲ್ ಕೋರ್ಟಿನ ಮುಂದೆ ನಡೆದ ವಿಚಾರಣೆಯ ವೇಳೆ ಇದಿರು ಕಕ್ಷಿಗಳಿಗೆ ತಮ್ಮ ಆರೋಪಗಳನ್ನು ಸತ್ಯವೆಂದು ಸಾಬೀತು ಪಡಿಸಲು ಸಾಧ್ಯವಾಗಿಲ್ಲ.

ನಂತರ ಈ ವಾರ ರಾಜಿ ಮಾತುಕತೆ ನಡೆದು ನಷ್ಟ ಪರಿಹಾರ ನೀಡಲು ಅವರು ಸಿದ್ಧರಾದರು ಹಾಗೂ ತಮ್ಮ ಆರೋಪವನ್ನು ಹಿಂತೆಗೆದಿದ್ದಾರೆ.

ರಾಜಕೀಯ ಇಸ್ಲಾಮ್ ಮತ್ತು ಮುಸ್ಲಿಂ ಬ್ರದರ್‍ಹುಡ್‍ನೊಂದಿಗೆ ಎಂಜಿಒ ನಾಯಕರು ಸಂಬಂಧ ಹೊಂದಿದ್ದಾರೆ ಎಂದು ಕೆಲವರು ಆರೋಪ ಹೊರಿಸಿದ್ದರು.

ಆದರೆ ಈ ಆರೋಪಗಳಿಗೆ ಯಾವುದೇ ಆಧಾರ ಇಲ್ಲ ಎಂದು ಎಂಜಿಒ ಪತ್ರಿಕೆ ಹೇಳಿಕೆಯಲ್ಲಿ ತಿಳಿಸಿತ್ತು.

ತಮಗೆ ಲಭಿಸುವ ನಷ್ಟ ಪರಿಹಾರದ ಮೊತ್ತವನ್ನು ಆಸ್ಟ್ರೇಲಿಯದಲ್ಲಿ ಜನಾಂಗೀಯ ತಾರತಮ್ಯ ಮತ್ತು ಇಸ್ಲಾಮೊಫೋಬಿಯ ಹಾಗೂ ಸೆಮಿಟಿಕ್ ವಿರೋಧದ ವಿರುದ್ಧ ಹೋರಾಟ ನಡೆಸುತ್ತಿರುವ ಸಂಘಟನೆಗಳಿಗೆ ನೀಡುವುದಾಗಿ ಎಂಜಿಒ ಹೇಳಿದೆ.

ಈ ಹಿಂದೆಯೂ ಎಫ್‍ಪಿಒ ಹಲವು ಇಸ್ಲಾಮೀ ವಿರೋಧಿ ಹೇಳಿಕೆಯನ್ನು ನೀಡಿತ್ತು. ಆಸ್ಟ್ರೀಯದ ವಿದೇಶ, ಗೃಹ, ರಕ್ಷಣಾ ಇಲಾಖೆ ಎಫ್‍ಪಿಒದ ನೇತೃತ್ವದಲ್ಲಿದೆ ಎನ್ನುವುದು ಇಲ್ಲಿ ಗಮನಾರ್ಹ.

Leave a Reply