ಎಲ್ಲದರಲ್ಲೂ ಮನುಷ್ಯನಿಗೆ ನಿರ್ಲಕ್ಷ್ಯತೆ ಸರ್ವೇಸಾಮಾನ್ಯವಾಗಿ ಬಿಟ್ಟಿದಿಯೇನೋ? ಆದರೆ ಕರ್ನಾಟಕ ಮಿಲ್ಕ್ ಫೆಡರೇಷನ್ (ಕೆಎಮ್‌ಎಫ್) ಅವರ ನಿರ್ಲಕ್ಷ್ಯತೆ ಈ ವಿಡಿಯೋದಲ್ಲಿ ಎದ್ದು ಕಾಣುತ್ತಿದೆ.

ನಿನ್ನೆಯಿಂದ ಸಾಮಾಜಿಕ ಜಲಾತಾಣದಲ್ಲಿ ನಂದಿನಿ ಹಾಲಿನ ಪ್ಯಾಕೆಟ್ ಒಂದರಲ್ಲಿ ಜೀವಂತ ಜಿರಳೆಯೊಂದು ಕಂಡುಬಂದ ವಿಡಿಯೋ ವೈರಲಾಗಿದೆ.

ಮಹಿಯೊರ್ವಳು ಖರೀದಿಸಿದ ಹಾಲಿನಲ್ಲಿ ಜಿರಳೆ ಕಂಡುಬಂದಿದ್ದು, ನಂತರ ಅದರ ವಿಡಿಯೋ ತೆಗೆದು ಹರಿಯಬಿಟ್ಟಿದ್ದಾರೆ. ಇಂಥಹ ಹಲವು ಘಟನೆಗಳು ಈ ಹಿಂದೆ ನಡೆದಿದ್ದರೂ ಕೂಡ ಇಂತಹ ಘಟನೆಗಳು ಮರುಕಳಿಸುತ್ತಿದೆ.


ಮಕ್ಕಳು ಕುಡಿಯುವ ಹಾಲಿನಲ್ಲಿ ಕೀಟಗಳು ಹೊಕ್ಕಿ ಕೂತರೆ ಮುಂದಾಗುವ ಅನಾಹುತಕ್ಕೆ ಯಾರು ಹೊಣೆಯಾಗ್ತಾರೆ? ವಿಷಕಾರಿ ಕೀಟಗಳೇನಾದರು ಅದರೊಳಗೆ ಸೇರಿಕೊಂಡರೆ? ಎಂಬಿತ್ಯಾದಿ ಪ್ರಶ್ನೆಗಳು ಸಾರ್ವಜನಿಕ ವಲಯಗಳಲ್ಲಿ ಕೇಳಿಬರುತ್ತಿವೆ.

ಈ ವಿಡಿಯೋ ಯಾವಾಗದ್ದು ಎಂದು ತಿಳಿದು ಬಂದಿಲ್ಲ. ಆದರೆ ವಿವಿಧ ಕ್ಯಾಫ್ಷನ್ ಮೂಲಕ ವಾಟ್ಸಪ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಇದು ಒಬ್ಬರಿಂದೊಬ್ಬರಿಗೆ ವಿಡಿಯೋ ಹರಿಯುತ್ತಿದೆ.

ಒಟ್ಟಿನಲ್ಲಿ ಜಿರಳೆಯೊಂದು ಹಾಲಿನ ಪ್ಯಾಕೆಟ್‌ನಲ್ಲಿ ಕಂಡುಬಂದ ವಿಡಿಯೋ ವೈರಲ್ ಆದ ಪರಿಣಾಮ ಸ್ಪಷೀಕರಣ ಯಾವ ರೀತಿ ನೀಡಬಹುದು ಎಂದು ಕಾದು ನೋಡಬೇಕಾಗಿದೆ.

Leave a Reply