ಕರಾಚಿ: ಪಾಕಿಸ್ತಾನದ ಓಪನಿಂಗ್ ಬ್ಯಾಟ್ಸ್‍ಮನ್ ನಾಸೆರ್ ಜಮ್ಶೆಡ್‍ಗೆ ಪಾಕಿಸ್ತಾನ ಕ್ರಿಕೆಟ್ ನಿಯಂತ್ರಣ ಮಂಡಳಿ ಸ್ಪಾಟ್ ಫಿಕ್ಸಿಂಗ್ ಆರೋಪದಲ್ಲಿ ಹತ್ತು ವರ್ಷಗಳ ನಿಷೇಧ ಹೇರಿದೆ. ಪಾಕಿಸ್ತಾನದ ಸೂರ್ ಲೀಗ್(ಪಿಎಸ್‍ಎಲ್) ಟ್ವಿಂಟಿ20 ಟೂರ್ನಮೆಂಟ್‍ನಲ್ಲಿ ನಾಸೆರ್ ಸ್ಪಾಟ್ ಫಿಕ್ಸಿಂಗ್ ಮಾಡಿದ್ದಾರೆ ಎಂದು ಅವರ ವಿರುದ್ಧ ಆರೋಪ ಹೊರಿಸಲಾಗಿದೆ.

ಭ್ರಷ್ಟಾಚಾರ ತಡೆ ನ್ಯಾಯಾಲಯದಲ್ಲಿ ಅವರ ವಿರುದ್ಧ ಆರೋಪ ಸಾಬೀತಾಗಿದ್ದು ಹತ್ತುವರ್ಷ ಕ್ರಿಕೆಟಿನಿಂದನಿಷೇಧಿಸಲಾಗಿದೆ. ನಾಸೆರ್ ಪಾಕಿಸ್ತಾನಕ್ಕಾಗಿ 2 ಟೆಸ್ಟ್ ಮತ್ತು 48 ಅಂತಾರಾಷ್ಟ್ರೀಯ ಏಕದ ದಿನ ಪಂದ್ಯ ಆಡಿದ್ದಾರೆ. ನಿಷೇಧ ಹೇರುವ ಮೊದಲು 2017 ಫೆಬ್ರವರಿಯಲ್ಲಿ ನಾಸೆರ್‍ರನ್ನು ಕ್ರಿಕೆಟಿನ ಎಲ್ಲ ಪ್ರಕಾರಗಳಿಂದ ಅಮಾನತಿನಲ್ಲಿರಿಸಲಾಗಿತ್ತು. ಕಳೆದ ಡಿಸೆಂಬರ್‍ನಲ್ಲಿ ತನಿಖೆಗೆ ಅಸಹಕಾರ ತೋರಿಸಿದ್ದಕ್ಕಾಗಿ ಒಂದು ವರ್ಷದ ನಿಷೇಧ ಹೇರಲಾಗಿತ್ತು.

ಪಿಸಿಬಿಯ ಕಾನೂನು ಸಲಹೆಗಾರ ತಫಾಝುಲ್ ರಿಝ್ವಿ ನಾಸೆರ್ ಸ್ಪಾಟ್ ಫಿಕ್ಸಿಂಗ್‍ನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಹೇಳಿದ್ದಾರೆ. ಪಿಸಿಬಿ ನಾಸೆರ್ ವಿರುದ್ಧ ಹಲವು ಆರೋಪಗಳನ್ನು ಹೊರಿಸಿತ್ತು. ನಂತರ ಟ್ರಿಬ್ಯೂನಲ್ ನಾಸೆರ್ ಜಮ್ಶೆಡ್‍ರನ್ನು ಹತ್ತು ವರ್ಷ ನಿಷೇಧಿಸುವ ನಿರ್ಧಾರ ಮಾಡಿತು. ಕ್ರಿಕೆಟ್ ಮತ್ತು ಕ್ರಿಕೆಟ್‍ನ ಯಾವುದೇ ಆಡಳಿತಾತ್ಮಕ ವ್ಯವಸ್ಥೆಯಲ್ಲಿಯೂ ನಾಸೆರ್ ಪಾಲ್ಗೊಳ್ಳುವಂತಿಲ್ಲ ಎಂದು ರಿಝ್ವಿ ತಿಳಿಸಿದ್ದಾರೆ.

ನಾಸೆರ್ ಪಿಎಸ್‍ಎಲ್‍ನ ಎರಡು ಆವೃತ್ತಿಗಳಲ್ಲಿ ಪಾಲ್ಗೊಂಡಿರಲಿಲ್ಲ.ಆದರೆ ಕಳೆದ ವರ್ಷ ಟ್ವೆಂಟಿ 20 ಲೀಗ್‍ನಲ್ಲಿ ನಡೆದ ಸ್ಪಾಟ್‍ಫಿಕ್ಸಿಂಗ್‍ನಲ್ಲಿಅವರು ದೊಡ್ಡ ಪಾತ್ರವಹಿಸಿದ್ದಾರೆ. ಬ್ಯಾಟ್ಸ್‍ಮನ್ ಶಾರ್ಜಿಲ್ ಖಾನ್ ಮತ್ತು ಖಾಲಿದ್ ಲತೀಫ್‍ರಿಗೆ ಕೂಡಾ ಸ್ಫಾಟ್ ಫಿಕ್ಸಿಂಗ್‍ಗಾಗಿ ಐದೈದು ವರ್ಷ ನಿಷೇಧ ಹೇರಲಾಗಿದೆ.ಇದೇವೇಳೆ ವೇಗಿ ಮಉಹಮ್ಮದ್ ಇರ್ಫಾನ್ ಒಂದು ವರ್ಷ ಮತ್ತು ಆಲ್‍ರೌಂಡರ್ ಮುಹಮ್ಮದ್ ನವಾಝ್‍ಗೆ ಎರಡು ತಿಂಗಳ ನಿಷೇಧ ವಿಧಿಸಲಾಗಿದೆ.

Leave a Reply