ಸಾಂದರ್ಭಿಕ ಚಿತ್ರ

ಪ್ರಸವ ವೇದನೆಯಲ್ಲಿದ್ದ 25 ರ ಹರೆಯದ ಮಹಿಳೆಗೆ ನಡೆದು ಬರಲು ತಿಳಿಸಿದ ಸಿಬ್ಬಂದಿಗಳ ನಿರ್ಲಕ್ಷ್ಯ ವರ್ತನೆಯಿಂದಾಗಿ ಮಗು ಆಸ್ಪತ್ರೆಯ ನೆಲಕ್ಕಪ್ಪಳಿಸಿ ತಕ್ಷಣ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಮಧ್ಯಪ್ರದೇಶದ ಬೇತುಲ್ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ.

ಗೋಧಾಡೊಂಗ್ರಿ ನಿವಾಸಿ ನೀಲು ವರ್ಮಾ ಎಂಬುವವರಿಗೆ ಪ್ರಸವ ವೇದನೆ ಕಾಣಿಸಿಕೊಂಡಿದ್ದರಿಂದ ಜನನಿ ಎಕ್ಸ್‌ಪ್ರೆಸ್‌ ಆಂಬ್ಯುಲೆನ್ಸ್ ಮೂಲಕ ಬೇತುಲ್ ಜಿಲ್ಲಾ ಆಸ್ಪತ್ರೆಗೆ ತರಲಾಗಿತ್ತು ಎಂದು ಡಾ. ಎ.ಕೆ.ಬರಂಗಾ ತಿಳಿಸಿದ್ದಾರೆ.

ಆಸ್ಪತ್ರೆಯ ಸಿಬ್ಬಂದಿಗಳಲ್ಲಿ ಪ್ರಸವ ವೇದನೆಯ ಕುರಿತು ತಿಳಿಸಿದುದಲ್ಲದೇ ನಡೆಯಲು ಅಸಾಧ್ಯವೆಂಬುದಾಗಿ ಕೋರಿ ಸ್ಟ್ರೇಚ್ಚರ್ ನೀಡಲು ಬೇಡಿಕೊಂಡರೂ ಸಿಬ್ಬಂದಿಗಳು ಅದನ್ನು ಒದಗಿಸದೇ ಆಕೆಗೆ ನಡೆಯಲು ತಿಳಿಸಿದರೆಂಬುದನ್ನು ಆಸ್ಪತ್ರೆ ಒಪ್ಪಿಕೊಂಡಿದೆ.
ಡಾ. ಬರಂಗಾರವರು ಆಸ್ಪತ್ರೆಯ ಸಿಬ್ಬಂದಿಗಳಿಂದಾದ ಈ ದೊಡ್ಡ ನಿರ್ಲಕ್ಷ್ಯ ವನ್ನು ಒಪ್ಪಿಕೊಂಡಿದ್ದು ಈ ಘಟನೆಗೆ ಸಂಬಂಧಿಸಿದಂತೆ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದಿದ್ದಾರೆ.
ನೀಲು ವರ್ಮಾರವರ ಪತಿ ವಿಕಾಸ್ ವರ್ಮಾ ‘ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರವು ರಜೆಯಾದುದರಿಂದ ತೆರೆದಿರದ ಕಾರಣದಿಂದಾಗಿ ಆಂಬ್ಯುಲೆನ್ಸ್ ಮೂಲಕ ಪತ್ನಿಯನ್ನು ಬೇತುಲ್ ಆಸ್ಪತ್ರೆಗೆ ಕರೆ ತಂದಿದ್ದೆ. ನಡು ದಾರಿಯಲ್ಲಿಯೇ ಪತ್ನಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಆಸ್ಪತ್ರೆ ಯ ಸಿಬ್ಬಂದಿಗಳು ಆಕೆಗೆ ಸ್ಟ್ರೆಚ್ಚರ್ ಆಗಲಿ ವೀಲ್ ಚೇರ್ ಆಗಲಿ ನೀಡಲೇ ಇಲ್ಲ. ಆಕೆಯನ್ನು ಅವರು ನಡೆಸಿಕೊಂಡು ಲೇಬರ್ ರೂಮ್ಗೆ ಕೊಂಡೊಯ್ಯುಲಾರಂಭಿಸಿದರಾದರೇ ನಡೆದ ಸ್ಥಿತಿಯಲ್ಲೇ ಹೆರಿಗೆಯಾದುದರಿಂದ ಮಗುವು ಆಸ್ಪತ್ರೆಯ ನೆಲಕ್ಕಪ್ಪಳಿಸಿ ಸಾವನ್ನಪ್ಪಿತು ” ಎಂದು ತಿಳಿಸಿದ್ದಾರೆ‌.

Leave a Reply