ಲಉಡುಪಿ : ಕಳೆದ‌ ಹಲವಾರು ವರ್ಷಗಳಿಂದ ತನ್ನ ಗುಡಿಸಲಿನಲ್ಲೇ ವಾಸ ಹೂಡಿದ್ದ 103 ವರ್ಷ ಪ್ರಾಯದ ಹಿರಿಯ ಅಜ್ಜಿಯೊರ್ವರಿಗೆ ಊರಿನ ಗ್ರಾಮಸ್ಥರು ಸೇರಿ ಮನೆ ನಿರ್ಮಿಸಿಕೊಟ್ಟ ಅಪರೂಪದ ಘಟನೆ‌ ಬ್ರಹ್ಮಾವರದ ಕರ್ಜೆ ಗ್ರಾಮದಲ್ಲಿ ನಡೆದಿದೆ.

103 ವರ್ಷ ಪ್ರಾಯವಿದ್ದರು ಸರಕಾರದ ಯಾವುದೇ ಸೌಲಭ್ಯಗಳನ್ನು ಪಡೆಯದೆ ಒಬ್ಬಂಟಿಯಾಗೇ ವಾಸಿಸುತ್ತಿದ್ದ ಸರಸಜ್ಜಿಗೆ ಬಾಲಕೃಷ್ಣ ಶೆಟ್ಟಿ ಹಳುವಳ್ಳಿ ಎಂಬವರ ಮನೆ ನಿರ್ಮಿಸಲು ಸಹಾಯ ಮಾಡಿದ್ದಾರೆ. ಈ ಮನೆಗೆ ಸುಮಾರು ಒಂದೂವರೆ ಲಕ್ಷ ರೂಪಾಯಿಯಷ್ಟು ಖರ್ಚಾಗಿದೆ.‌ ಜೊತೆಗೆ ಗ್ರಾಮಸ್ಥರು ಕೂಡ ಮನೆ ನಿರ್ಮಾಣಕ್ಕೆ ಖರ್ಚು ಮಾಡಿ ಸರಸಜ್ಜಿಗೆ ಈ ಸೌಲಭ್ಯ ಒದಗಿಸಬೇಕು ಎಂಬುದು ಬಾಲಕೃಷ್ಣ ಅವರ  ಬಯಕೆಯಾಗಿತ್ತು ಎನ್ನುತ್ತಾರೆ.

ಸ್ವಾಭಿಮಾನಿಯಾಗಿ ಬದುಕುತ್ತಿದ್ದ ಸರಸಜ್ಜಿ, ಇಲ್ಲಿಯವರೆಗೆ ಯಾರ ಬಳಿಯೂ ಸಹಾಯ ಕೇಳದೆ ಸ್ವಾಭಿಮಾನದಿಂದ ಬದುಕುತ್ತಿದ್ದರು. ಅವರ ಬಳಿ ಸಹಾಯ, ಅಥವಾ ಸರಕಾರಿ ಸವಲತ್ತುಗಳ ಬಗ್ಗೆ ಕೇಳಿದರೆ “ನನಗೆ ನೆಮ್ಮದಿಯ ಬದುಕು ಸಿಕ್ಕರೆ ಸಾಕು. ಸರಕಾರಿ ಸೌಲಭ್ಯಗಳನ್ನಿಟ್ಟುಕೊಂಡು ನಾನೇ ಮಾಡಲಿ” ಎನ್ನುತ್ತಾರೆ.

ಇಲ್ಲಿಯವರೆಗೆ ಹರಕಲು ಗುಡಿಸಲಿನಲಿ ವಾಸಿಸುತ್ತಿದ್ದ ಸರಜ್ಜಿಗೆ ಮೂಲ ಸೌಕರ್ಯ ಒದಗಿಸಿ ಕೊಡಬೇಕೆಂಬುದು ನಮ್ಮ ಇರಾದೆಯಾಗಿತ್ತು. ಈ ನಿಟ್ಟಿನಲ್ಲಿ ಅವರಿಗೊಂದು ಮನೆಯನ್ನು ನಿರ್ಮಿಸಿದ್ದು ಒಳ್ಳೆಯ ಕಾರ್ಯ ಎಂದು ಸ್ಥಳೀಯರಾದ ದೇವು ನಾಯಕ್ ತಿಳಿಸಿದ್ದಾರೆ.

ಸರಜ್ಜಿಗೆ ಸರಕಾರಿ ಸೌಲಭ್ಯಗಳನ್ನು ಒದಗಿಸಿ ಕೊಡುವುದಾಗಿ ಹಲವರು ಭರವಸೆ ನೀಡಿದ್ದಾರೆ. ‌ಆದರೆ ಅಜ್ಜಿ ಅದನ್ನು ವಿರೋಧಿಸಿದ್ದಾರೆ. ಜೀವನದ ಕೊನೆಯ ದಿನದವರೆಗೂ ಸ್ವಾಭಿಮಾನದಿಂದ ಬದುಕಬಲ್ಲೆ ಎಂಬ ಆತ್ಮ ಸ್ಥೈರ್ಯತೆ ಅಜ್ಜಿಯಲ್ಲಿ ಕಂಡಿದ್ದು ನಿಜಕ್ಕೂ ಪರಮಾಶ್ಚರ್ಯ ಎನ್ನಬೇಕು.

Leave a Reply