ಕೇರಳದಲ್ಲಿ ನಿಪಾ ವೈರಸ್ ಹರಡಲು ಬಾವಲಿ ತಿಂದ ಹಣ್ಣುಗಳಿಂದ ಎಂಬುದು ಸಂಶೋಧನೆದಿಂದ ಬಹಿರಂಗವಾಗಿದೆ. ಇಂಡ್ಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಈ ವಿವರವನ್ನು ಬಹಿರಂಗಗೊಳಿಸಿದೆ.

ಕೇಂದ್ರ ಸಚಿವ ಜೆ.ಪಿ ನಂದ ಈ ವಿವರ ಬಹಿರಂಗಗೊಳಿಸಿದರೂ ಈ ಕುರಿತ ಫಲಿತಾಂಶಗಳ ಕುರಿತು ಅಧಿಕೃತವಾಗಿ ವರದಿ ಪ್ರಕಟವಾಗಿಲ್ಲ.

ಮೊದಲು ಪರೀಕ್ಷಿಸಿದ 21 ಬಾವಲಿಗಳಲ್ಲಿ ಈ ವೈರಸ್ ಕಂಡು ಬಂದಿಲ್ಲ . ಎರಡನೇಯ ಬಾರಿ ಸಂಶೋಧನೆ ನಡೆಸಿದಾಗ 55 ಬಾವಲಿಗಳಲ್ಲಿ ವೈರಸ್ ಇರುವುದು ಕಂಡು ಬಂದಿದೆ. ನಿಫಾ ರೋಗಕ್ಕೆ ತುತ್ತಾಗಿ ಕೇರಳದಲ್ಲಿ ಹದಿನೇಳು ಮಂದಿ ಮೃತರಾಗಿದ್ದರು. ಇದರಿಂದಾಗಿ ಭೀತಿಯ ಪರಿಸ್ಥಿತಿ ನಿರ್ಮಾಣವಾಗಿ ಆತಂಕದ ಸ್ಥಿತಿ ತಂದೊಡ್ಡಿತ್ತು. ರೋಗದ ನೈಜ ಕಾರಣ ತಿಳಿಯದೆ ರೋಗ ನಿಯಂತ್ರಿಸಲು ತುಂಬಾ ತೊಂದರೆ ಅನುಭವಿಸಬೇಕಾಯಿತು. ರೋಗ ಎರಡನೇ ಹಂತ ದಾಟುವುದಕ್ಕಿಂತ ಮೊದಲೇ ರೋಗವನ್ನು ನಿಯಂತ್ರಿಸಲು ಸಾದ್ಯವಾಯಿತು.

Leave a Reply