ವಾಷಿಂಗ್ಟನ್‌: ಪಂಜಾಬ್ ಬ್ಯಾಂಕ್ ಹಗರಣ ರೂವಾರಿ, ಬಹುಕೋಟಿ ರೂಪಾಯಿಗಳನ್ನು ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ವಜ್ರದ ವ್ಯಾಪಾರಿ ನೀರವ್ ಮೋದಿ ಅಮೇರಿಕಾದಲ್ಲಿದ್ದಾರೆ ಎಂಬ ಮಾಧ್ಯಮ ವರದಿಗಳನ್ನು ದೃಢಪಡಿಸಲು ಸಾಧ್ಯವಾಗುತ್ತಿಲ್ಲ ಎಂದು ಅಮೇರಿಕಾದ ವಿದೇಶಾಂಗ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.

ನೀರವ್‌ ಮೋದಿ ಅವರು ಅಮೇರಿಕಾದಲ್ಲಿ ಇದ್ದಾರೆ ಎಂಬ ಮಾಧ್ಯಮ ವರದಿಗಳ ಬಗ್ಗೆ ನಾವು ಗಮನಹರಿಸಿದ್ದೇವೆ. ಆದರೆ ಆತ ಅಮೆರಿಕದಲ್ಲಿ ಇರುವುದನ್ನು ನಾವು ದೃಢಪಡಿಸಲಾರೆವು ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಅಮೆರಿಕ ವಿದೇಶಾಂಗ ಅಧಿಕಾರಿ ಉತ್ತರಿಸಿದ್ದಾರೆ.

ನೀರವ್‌ ಮೋದಿ ಅಮೇರಿಕಾದಲ್ಲಿರುವುದನ್ನು ಪತ್ತೆ ಹಚ್ಚಲು ನೀವು ಭಾರತ ಸರಕಾರಕ್ಕೆ ನೆರವಾಗುವಿರಾ ಎಂಬ ಪ್ರಶ್ನೆಗೆ, ನೀರವ್‌ ಮೋದಿ ಕುರಿತ ತನಿಖೆ ಸಂಬಂಧ ಭಾರತೀಯ ಅಧಿಕಾರಿಗಳಿಗೆ ನೆರವಾಗುವ ಪ್ರಶ್ನೆಯನ್ನು ನ್ಯಾಯಾಂಗ ಇಲಾಖೆಗೆ ಉಲ್ಲೇಖೀಸಲಾಗುವುದು ಎಂದು ಅವರು ಹೇಳಿದ್ದಾರೆ

Leave a Reply