ಲಂಡನ್: ಪಂಜಾಬ್ ಬ್ಯಾಂಕ್ ಗೆ ವಂಚಿಸಿ ಪರಾರಿಯಾದ ಆರೋಪಿ ಪ್ರಮುಖ ವಜ್ರ ವ್ಯಾಪಾರಿ ನೀರವ್ ಮೋದಿ ಬ್ರೆಝಿಲ್ ಗೆ ಪರಾರಿಯಾದ ಬಗ್ಗೆ ವರದಿಯಾಗಿದೆ. ಸಿಂಗಾಪುರದ ಪಾಸ್ ಪೋರ್ಟ್ ಉಪಯೋಗಿಸಿ ಆತ ಲಂಡನ್ ನಿಂದ ಪರಾರಿಯಾಗಿರುವುದಾಗಿ ವರದಿಗಳು ತಿಳಿಸಿವೆ.

ಭಾರತೀಯ ಹೈಕಮಿಶನ್ ಬ್ರಿಟಿಷ್ ಸರಕಾರದ ಉತ್ತರದ ನಿರೀಕ್ಷೆಯಲ್ಲಿರುವಾಗ ನೀರವ್ ಮೋದಿ ಪಲಾಯನಗೈದಿದ್ದಾರೆ. ಇದೇ ವೇಳೆ ನೀರವ್ ಮೋದಿ ಭಾರತದ ಪಾಸ್ಪೋರ್ಟ್ ಉಪಯೋಗಿಸಿರುವರೇ ಅಥವಾ ಸಿಂಗಾಪುರದ್ದು ಉಪಯೋಗಿಸಿದ್ದರೇ ಎಂಬ ಬಗ್ಗೆ ನಿಖರ ಮಾಹಿತಿ ಲಭ್ಯವಿಲ್ಲ ಎಂದು ಲಂಡನಿನಲ್ಲಿರುವ ಇಂಡಿಯನ್ ಹೈಕಮಿಶನ್ ತಿಳಿಸಿದೆ.

Leave a Reply