ಪುತ್ತೂರು: ಮದುವೆ ಎಂದ ಮೇಲೆ ವಿಶಿಷ್ಟ ಮೋಜು, ನೃತ್ಯ, ಸಂಗೀತ, ದಿಬ್ಬಣ ಎಲ್ಲವೂ ಸಾಮಾನ್ಯ. ತಮ್ಮ ಮದುವೆಯನ್ನು ವಿಶಿಷ್ಟವಾಗಿಸಲು ಡೋಲು ಬಾರಿಸಿ, ಕುದುರೆಯೇರಿ ದಿಬ್ಬಣ ನಡೆಯುತ್ತದೆ. ಇನ್ನೂ ಕೆಲವರು ಹೆಲಿಕಾಪ್ಟರ್ ನಲ್ಲಿ ಬಂದಿಳಿಯುತ್ತಾರೆ.

ಆದರೆ ಪುತ್ತೂರಿನಲ್ಲಿ ವರ ಮದುವೆ ಮಂಟಪಕ್ಕೆ ಜೆಸಿಬಿಯಲ್ಲಿ ವಧುವೊಂದಿಗೆ ಪಯಾಣ ಮಾಡಿರುವ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮದುಮಗ ಚೇತನ್ ಕಲ್ಕಟ್ಟ, ಒಂದು ದಶಕಕ್ಕೂ ಹೆಚ್ಚು ಕಾಲ ಜೆಸಿಬಿ ಯಂತ್ರವನ್ನು ನಿರ್ವಹಿಸುತ್ತಿದ್ದರು. 27 ವರ್ಷದ ಚೇತನ್ ತನ್ನ ವಿವಾಹದ ವೇಳೆ
ತನಗೆ ಅನ್ನ ನೀಡುತ್ತಿರುವ ಉದ್ಯೋಗದ ಮೇಲಿನ ಪ್ರೀತಿಯನ್ನು ತಮ್ಮ ಮದುವೆಯಲ್ಲೂ ಜೆಸಿಬಿ ಪ್ರೇಮ ಮೆರೆದಿದ್ದಾರೆ.

“ಮೊದಲಿಗೆ ಈ ಐಡಿಯಾ ನನ್ನ ಪತ್ನಿಗೆ ಮೆಚ್ಚುಗೆಯಾಗಲಿಲ್ಲ. ಓಪನ್ ಜೆಸಿಬಿಯಲ್ಲಿ ಕೂರುವ ಬಗ್ಗೆ ಅವಳಲ್ಲಿ ಭಯ ಇತ್ತು. ಕಳೆದ ಹತ್ತು ವರ್ಷಗಳಿಂದ ಈ ಜೆಸಿಬಿಯನ್ನು ನಾನು ನಿರ್ವಹಿಸುತ್ತಿದ್ದೇನೆ ಎಂದಾಗ ಅವಳು ಒಪ್ಪಿದಳು ಎಂದು ಚೇತನ್ ಹೇಳುತ್ತಾರೆ.

ಪರ್ಪುಂಜ ಶಿವಕೃಪಾ ಸಭಾಭವನದಲ್ಲಿ ವಧು ಮಮತಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕಾರಿನಲ್ಲಿ ದಿಬ್ಬಣ ಬಂದಿದ್ದ ವಧೂ ವರರ ಕಡೆಯವರು ಮದುವೆ ಮುಗಿದ ಮೇಲೆ ಜೆಸಿಬಿಯಲ್ಲಿ ಮನೆಗೆ ತೆರಳಿದ್ದಾರೆ.

Leave a Reply