ಲಖನೌ: ಆಧಾರ್ ಕಾರ್ಡ್ ಕಡ್ಡಾಯವಾದಂದಿನಿಂದ ನಮ್ಮ ದೇಶದಲ್ಲಿ ದಿನ ನಿತ್ಯ ಏನೆಲ್ಲಾ ಘಟನೆಗಳು ಸಂಭವಿಸುತ್ತದೆ. ಆಧಾರ್ ಇಲ್ಲದೆ ಚಿಕಿತ್ಸೆ ನಿರಾಕರಣೆ,ಆಧಾರ್ ಇಲ್ಲದೆ ಮೊಬೈಲ್ ಸ್ಥಗಿತ ಹೀಗೆ ಹತ್ತು ಹಲವು ಘಟನೆಗಳು ನಡೆಯುತ್ತಲೇ ಇರುತ್ತದೆ. ಇದೀಗ ಮತ್ತೊಂದು ಹೃದಯ ವಿದ್ರಾವಕ ಘಟನೆ ಸಂಭವಿಸಿದೆ.

ಆಧಾರ್ ಇಲ್ಲವೆಂಬ ಕಾರಣಕ್ಕೆ ತುಂಬು ಗರ್ಭಿಣಿಗೆ ಆಸ್ಪತ್ರೆಯೊಂದು ಚಿಕಿತ್ಸೆ ನೀಡಲು ನಿರಾಕರಿಸಿದೆ. ಅದರ ಪರಿಣಾಮವಾಗಿ ಆ ಗರ್ಭಿಣಿ ಮಹಿಳೆ ಆಸ್ಪತ್ರೆಯ ಗೇಟಿನ ಮುಂದೆಯೇ ಮಗುವಿಗೆ ಜನ್ಮ ನೀಡಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ಸಂಭವಿಸಿದೆ.

ಮಹಿಳೆಯನ್ನು ಶಹಗಂಜ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಂಬಂದಿಕರು ಕರೆ ತಂದಿದ್ದರು ಆಗ ಆಸ್ಪತ್ರೆಯ ಸಿಬ್ಬಂದಿ, ಆಧಾರ್ ಮತ್ತು ಬ್ಯಾಂಕ್ ಖಾತೆಯ ನಂಬರ್ ಕೇಳಿದ್ದಾರೆ.
ಆದರೆ ಅವು ನಮ್ಮಲ್ಲಿ ಇಲ್ಲ ಎಂದು ಅವರು ಹೇಳಿದಾಗ ಆಕೆಯನ್ನು ದಾಖಲಿಸಿಕೊಳ್ಳಲು ಸಿಬ್ಬಂದಿ ನಿರಾಕರಿಸಿದ್ದಾರೆ. ಈ ನಡುವೆ ಮಹಿಳೆ ಆಸ್ಪತ್ರೆಯ ಗೇಟ್‌ ಬಳಿಯೇ ಮಗುವಿಗೆ ಜನ್ಮ ನೀಡಿದ್ದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತವಾಗಿದೆ.

Leave a Reply