ಒಡಿಶಾ: ಅನ್ಯ ಜಾತಿಯ ಹೆಣ್ಣನ್ನು ವರಿಸಿದ್ದ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬನ‌ ಮಡದಿಯ ಅಕ್ಕನ ಮೃತದೇಹವನ್ನು ಸ್ಮಶಾನದವರೆಗೆ ಕೊಂಡೊಯ್ಯಲು ಇಡೀ ಗ್ರಾಮಸ್ಥರೇ ನಿರಾಕರಿಸಿದಕ್ಕೆ ತನ್ನ ಸೈಕಲ್‌ನಲ್ಲೇ ಸ್ಮಶಾನದವರೆಗೆ ಒಬ್ಬಂಟಿಯಾಗೇ ತಗೊಂಡು ಹೋದ ಘಟನೆ ಒಡಿಶಾದ ಕೃಷ್ಣಪಲ್ಲಿಯಲ್ಲಿ ನಡೆದಿದೆ.

ಒಡಿಶಾದ ಕೃಷ್ಣಪಲ್ಲಿಯ ನಿವಾಸಿಯಾಗಿರುವ ಚರುರ್ಭುಜ್​ ಬಾಂಕ್​ ಎಂಬಾತ ಮೊದಲ ಮಡದಿಗೆ ಮಕ್ಕಳಾಗಲಿಲ್ಲ ಎಂಬ ಕಾರಣಕ್ಕಾಗಿ ಅನ್ಯಜಾತಿಯ ಹೆಣ್ಣನ್ನು ಎರಡನೇ ಮದುವೆ ಮಾಡಿಕೊಂಡಿದ್ದ. ಈ ಕಾರಣಕ್ಕೆ ಇಡೀ ಗ್ರಾಮದ ಜನರೇ ಆ ಕುಟುಂಬಕ್ಕೆ ಬಹಿಷ್ಕಾರ ಹಾಕಿತ್ತು. ‌ಕುಡಿಯಲು ನೀರು ಆಹಾರವನ್ನೂ ನೀಡುತ್ತಿರಲಿಲ್ಲ.

ಕಳೆದ ಕೆಲ ದಿನಗಳ ಹಿಂದೆ ಚತುರ್ಭುಜನ ಹೆಂಡತಿಯ ಅಕ್ಕನಿಗೆ ಡಯೇರಿಯಾ ಆಗಿದ್ದು, ಎರಡು ದಿನಗಳ ಚಿಕಿತ್ಸೆ ಬಳಿಕ ಬುಧವಾರದಂದು ಆಸ್ಪತ್ರೆಯಲ್ಲೇ ಚಿಕಿತ್ಸೆ ಫಲಕಾರಿಯಾಗದೆ ಆವರು ಸಾವನ್ನಪ್ಪಿದ್ದಾರೆ. ಆಸ್ಪತ್ರೆಯ ಆ್ಯಂಬುಲೆನ್ಸ್​ ಮಹಿಳೆಯ ಶವವನ್ನು ಚತುರ್ಭುಜ್​ರವರ ಮನೆಯವರೆಗೂ ತಲುಪಿಸಿತ್ತು. ಆದರೆ ಶವ ಸ್ಮಶಾನಕ್ಕೆ ಕೊಂಡೊಯ್ಯಬೇಕಾದ ಸಂದರ್ಭದಲ್ಲಿ ಇಡೀ ಗ್ರಾಮವೇ ಆತನಿಗೆ ಸಹಾಯ ಮಾಡಲು ನಿರಾಕರಿಸಿದೆ.

ಮಹಿಳೆಯ ಅಂತಿಮ ಕ್ರಿಯೆಯಲ್ಲಿ ಪಾಲ್ಗೊಳ್ಳಲು ಗ್ರಾಮಸ್ಥರು ನಿರಾಕರಿಸಿದ್ದರು. ಗ್ರಾಮಸ್ಥರಿಂದ ಬಹಿಷ್ಕಾರಕ್ಕೆ ಒಳಗಾದ ಚತುರ್ಭುಜ‌ ಕೊನೆಗೆ ಬೇರೆ ದಾರಿ ಕಾಣದೆ ತನ್ನ ಸೈಕಲ್‌ನಲ್ಲಿ ಮಹಿಳೆಯ ಶವವನ್ನು ಕಟ್ಟಿ ಸ್ಮಶಾನದವರೆಗೆ ಒಬ್ಬಂಟಿಯಾಗೇ ಕೊಂಡೊಯ್ದು ಅಂತಿಮ ಕ್ರಿಯೆ ನೆರವೇರಿಸಿದ್ದಾನೆ.

ಈ ಘಟನೆ ನಡೆದ ಕೆಲವೇ ಕೆಲವು ಘಂಟೆಗಳಲ್ಲಿ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನರು ಗ್ರಾಮಸ್ಥರಿಗೆ ಶಾಪ ಹಾಕಿದ್ದಾರೆ. ‌ಮನುಷ್ಯ ಸತ್ತರು ಕರುಣೆ ತೋರದ ಜನರಿಗೆ ಧರ್ಮ ಇದ್ದರೆಷ್ಟು ಇಲ್ಲದಿದ್ದರೆಷ್ಟು ಎಂದು ಕಾಮೆಂಟ್, ಸ್ಟೇಟಸ್ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ‌. ಮತ್ತು ಕೆಲವರು ಈ ಹಿಂದೆ ಇದೇ ರೀತಿ ವ್ಯಕ್ತಿಯೊಬ್ಬನ ಮಡದಿ ಸತ್ತಾಗಲು ಇದನ್ನೆ ಮಾಡಿದ್ದಾರೆ ಎಂಬುದನ್ನು ಸ್ಮರಿಸಿಕೊಂಡರು.

Leave a Reply