ಒಡಿಶಾದ ಖಾಸಗಿ ತರಬೇತಿ ಇನ್ಸ್ಟಿಟ್ಯೂಟ್ ನಲ್ಲಿ ಮಾನವ ಸಮಾಜ ನಾಚುವಂತಹ ಆಘಾತಕಾರಿ ಘಟನೆ ವರದಿಯಾಗಿದೆ. ಇಂಗ್ಲಿಷ್ ಶಿಕ್ಷಕರೊಬ್ಬರು ಸಂಬಳ ಕೇಳಿದ್ದಕ್ಕಾಗಿ ಮರಕ್ಕೆ ಕಟ್ಟಿ ಚಪ್ಪಲಿ ಹಾರ ಹಾಕಿ ಥಳಿಸಲಾಗಿದೆ.

ಮಾಯಾಧಾರ್ ಮೊಹಪತ್ರ ಎಂಬ ಶಿಕ್ಷಕರು ಒಡಿಶಾದ ನಾಗರ್ ಜಿಲ್ಲೆಯ ಸತ್ಯಾಸಾಯ್ ಟ್ಯುಟೋರಿಯಲ್ನಲ್ಲಿ ಬೋಧಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಕೋಚಿಂಗ್ ಇನಸ್ಟಿಟ್ಯೂಟ್ನ ಮಾಲಿಕ ತಪಾನ್ ಮೊಹಪತ್ರ ಕಳೆದ ಆರು ತಿಂಗಳಿನಿಂದ ಸಂಬಳ ನೀಡಿರಲಿಲ್ಲ. ಈ ನಿಟ್ಟಿನಲ್ಲಿ ಮಾಯಾಧಾರ್ ತನ್ನ ಸಂಬಳಕ್ಕಾಗಿ ಬೇಡಿಕೆ ಇಟ್ಟಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ತನ್ನ ಬಾಕಿ ಸಂಬಳವನ್ನು ಪಾವತಿಸಲು ಹಲವು ಬಾರಿ ಕೇಳಿಕೊಂಡಾಗ ಕೆಲಸವನ್ನು ತೊರೆದು ಬೇರೆಡೆಗೆ ಹೋಗುವಂತೆ ತಪನ್ ಆದೇಶಿಸಿದ್ದರು. ನಂತರ ಕುಪಿತಗೊಂಡು ಇಬ್ಬರು ಸಹಚರರ ಜೊತೆಗೆ ಶಿಕ್ಷಕನನ್ನು ಅಪಹರಿಸಿ, ಒಂದು ಅಜ್ಞಾತ ಸ್ಥಳಕ್ಕೆ ಕರೆದೊಯ್ದು, ಮರಕ್ಕೆ ಕಟ್ಟಿ ನಿಷ್ಕರುಣೆಯಿಂದ ಥಳಿಸಿ ವಿಡಿಯೋ ಮಾಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿದ್ದು, ಸದ್ಯಕ್ಕೆ ಕೋಚಿಂಗ್ ಸೆಂಟರ್ ಗೆ ಬೀಗ ಜಡಿಯಲಾಗಿದೆ.

Leave a Reply